ಮಡಿಕೇರಿ ಜು.31 :ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ನಾಪೋಕ್ಲು ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ಮತ್ತು ನಾಪೋಕ್ಲು ಕೊಡವ ಸಮಾಜದ ಸಂಯುಕ್ತಾಶ್ರಯದಲ್ಲಿ ತಾ.3 ರಂದು “ಕಕ್ಕಡ 18 ತೀನಿ ನಮ್ಮೆ- ಪೈಪೋಟಿ ಮತ್ತು ಪ್ರದರ್ಶನ” ನಡೆಯಲಿದೆ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚಟ್ಟೋಳಂಡ ಮನುಮುತ್ತಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಗ್ಗೆ 10 ಗಂಟೆಗೆ ನಾಪೋಕ್ಲು ಕೊಡವ ಸಮಾಜದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ನೆಲಜಿಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಚೀಯಕಪೂವಂಡ ಪೂವಿ ಸೋಮಣ್ಣ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪೆಮ್ಮಂಡ ಕೆ.ಪೊನ್ನಪ್ಪ ವಹಿಸಲಿದ್ದಾರೆ ಎಂದರು.

ತೀನಿ ಪ್ರದರ್ಶನಕ್ಕೆ ನಾಪೋಕ್ಲು ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷ ಮೂವೆರ ರೇಖಾ ಪ್ರಕಾಶ್ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ನಾಲಡಿ ನಿವೃತ್ತ ಮುಖ್ಯೋಪಾದ್ಯಾಯಿನಿ ಕೋಡಿಮಣಿಯಂಡ ಉಮಾ ಬಿದ್ದಯ್ಯ ಭಾಗವಹಿಸಲಿದ್ದಾರೆ.

ಕಕ್ಕಡ 18ರ ಕುರಿತು ಕಕ್ಕಬ್ಬೆಯ ಕಲಿಯಂಡ ಬೀನಾ ನವೀನ್ ವಿಚಾರ ಮಂಡಿಸಲಿದ್ದಾರೆ. ಕೊಡವ ತೀನಿರ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಕೊಡವಾಮೆಗೆ ಸಂಬಂಧಿಸಿದಂತೆ 10 ಪ್ರಶ್ನೆಗಳನ್ನು ಕೇಳಲಾಗುವದು. ಯಾರುಬೇಕಾದರೂ ಉತ್ತರ ನೀಡಬಹುದಾಗಿದ್ದು, ಸರಿ ಉತ್ತರ ನೀಡಿದವರಿಗೆ ಬಹುಮಾನ ನೀಡಲಾಗುವದು. ಮಹಿಳೆಯರಿಗಾಗಿ ವಾಲಗತ್ತಾಟ್ ಪೈಪೋಟಿಯನ್ನು ಕೂಡ ಆಯೋಜಿಸಲಾಗಿದೆ.

ಕೊಡವ ತೀನಿ ಪೈಪೋಟಿಯಲ್ಲಿ ಕೂವೆಲೆ ಪುಟ್ಟ್, ಮದ್ದು ಪುಟ್ಟ್, ಬಾಳೆನುರ್‍ಕ್, ಬಡವಕಜ್ಜಾಯ, ಬೂಕ್‍ಕಜ್ಜಾಯ, ಕೇಂಬು ಕರಿ, ಕಾಡ್‍ಮಾಂಗೆ ಕರಿ, ಕುರುಕರಿ, ಬೈಂಬಳೆ ಕರಿ, ಕುಮ್ಮು ಕರಿ, ಒಣ್‍ಕ್ ಯರ್ಚಿ, ಕೊಯಿಲೆ ಮೀನ್, ನಾಡ್ ಕೋಳಿ ಕರಿ, ಕಕ್ಕಳೆ ಞಂಡ್ ಕರಿ, ಪಂದಿ ಕರಿ, ಚಕ್ಕೆಕುರು ಪಜ್ಜ್ಜಿ, ಕೈಪುಳಿ ಪಜ್ಜಿ, ಸುಂಟಿ ಪಜ್ಜಿ, ಕೆಂಜರಿಸುಳಿ, ಕೇಂಬು ಪಜ್ಜಿ, ಅಂಬಟೆ ಪಾರ, ಚೋರಂಗೆ ಪಾರ, ಕೈಪುಳಿ ಪಾರ, ಬಡಪುಳಿ ಪಾರ, ಮಾಂಗೆ ಪಾರ ಹಾಗೂ ತಾತೆತೊಪ್ಪ್ ಬರ್‍ತದ್, ತೆರ್ಮೆತೊಪ್ಪ್ ಬರ್‍ತದ್, ಕಾಕೆ ತೊಪ್ಪ್ ಬರ್‍ತದ್, ಮಳು ತೊಪ್ಪ್ ಬರ್‍ತದ್, ಕೀರೆ ತೊಪ್ಪ್ ಬರ್ತದ್ ಇರಲಿದೆ.

ಎಲ್ಲಾ 30 ವಿಭಾಗಗಳ ಸ್ಪರ್ಧೆಗಳಿಗೂ ಬಹುಮಾನ ವಿತರಿಸಲಾಗುವದು. ಕಕ್ಕಡ ಮಾಡದ ವಿವಿಧ ಖಾದ್ಯಗಳ ಪ್ರದರ್ಶನ ಇರುತ್ತದೆ. ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇರುತ್ತದೆ ಎಂದು ಮನುಮುತ್ತಪ್ಪ ತಿಳಿಸಿದರು.

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ ಮಾತನಾಡಿ ಅಕಾಡೆಮಿಯ ಮೂಲಕ ಹೊರತರಲಾಗುವ ತ್ರೈಮಾಸಿಕ ಪತ್ರಿಕೆಯನ್ನು ಬೊಳ್ಳಿನಮ್ಮೆಯ ವಿಶೇಷ ಸಂಚಿಕೆಯಾಗಿ “ಪೊಂಗುರಿ” ಹೆಸರಿನಲ್ಲಿ ಇದೇ ಸಂದರ್ಭ ಅನಾವರಣ ಗೊಳಿಸಲಾಗುವದು ಎಂದರು.

ಸುದ್ದಿಗೋಷ್ಠಿಯಲ್ಲಿ ನಾಪೋಕ್ಲು ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಮೂವೇರ ರೇಖಾ ಪ್ರಕಾಶ್, ನಾಪೋಕ್ಲು ಕೊಡವ ಸಮಾಜದ ನಿರ್ದೇಶಕರಾದ ಬಿದ್ದಂಡ ಉಷಾ ದೇವಮ್ಮ, ಕಾಟುಮಣಿಯಂಡ ಉಮೇಶ್, ಮಾಳೆಯಂಡ ಅಯ್ಯಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರುಗಳಾದ ಬೊಳ್ಳಜ್ಜಿರ ಅಯ್ಯಪ್ಪ, ಟಾಟು ಮೊಣ್ಣಪ್ಪ, ನಾಳಿಯಮ್ಮಂಡ ಉಮೇಶ್ ಕೇಚಮ್ಮಯ್ಯ ನಾಪೋಕ್ಲು ಕೊಡವ ಸಮಾಜ ಪ್ರಧಾನ ಕಾರ್ಯದರ್ಶಿ ಅಜಿತ್ ನಾಣಯ್ಯ ಉಪಸ್ಥಿತರಿದ್ದರು.