ಚೆಟ್ಟಳ್ಳಿ, ಜು. 31: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಸದಸ್ಯ, ಅಲ್'ಮದೀನ ವಿಧ್ಯಾಕೇಂದ್ರದ ಶಿಲ್ಪಿ, ಕೊಡಗು ಉಲಮಾ ಒಕ್ಕೂಟದ ಅಧ್ಯಕ್ಷರಾಗಿದ್ದ ಶರಫುಲ್ ಉಲಮಾ ಅನುಸ್ಮರಣೆ , ಖತ್ಮುಲ್ ಖುರ್‍ಆನ್ ಕಾರ್ಯಕ್ರಮವು ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಕೊಂಡಂಗೇರಿ ಶಾದಿಮಹಲ್'ನಲ್ಲಿ ನಡೆಯಿತು.

ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಸ್ಥಳೀಯ ಖತೀಬ್ ಫಾಲಿಲಿ ಉಸ್ತಾದ್ ಪ್ರಾರ್ಥನೆ ಹಾಗೂ ಮರ್ಕಝುಲ್ ಹಿದಾಯ ಮ್ಯಾನೇಜರ್ ಇಸ್ಮಾಯಿಲ್ ಸಖಾಫಿ ಮುಖ್ಯ ಭಾಷಣ ಮಾಡಿದರು.

ಎಸ್.ವೈ.ಎಸ್. ರಾಜ್ಯ ನಾಯಕರಾದ ಹನೀಫ್ ಸಖಾಫಿ, ಯೂಸುಫ್ ಹಾಜಿ ಕೊಂಡಂಗೇರಿ ಜಮಾಅತ್ ಅಧ್ಯಕ್ಷರು, ಶಾದುಲ್ ಹಾಜಿ ಜಮಾಅತ್ ಮುಖ್ಯತಕ್ಕಸ್ತರು, ಎಸ್ಸೆಸ್ಸೆಫ್ ರಾಜ್ಯ ನಾಯಕರುಗಳಾದ ಯಾಕೂಬ್ ಮಾಸ್ಟರ್ ಕೊಳಕೇರಿ, ಸಿರಾಜುದ್ದೀನ್ ಸಖಾಫಿ ಕನ್ಯಾನ, ರಫೀಖ್ ನೆಲ್ಯಾಹುದಿಕೇರಿ, ಶರೀಫ್ ಹೊಸತೋಟ, ಮುಬಶ್ಶಿರ್ ಅಹ್ಸನಿ, ಅಬ್ದುಲ್ಲಾ ಎಸ್ ವೈ ಎಸ್ ಬ್ರಾಂಚ್ ಅಧ್ಯಕ್ಷರು, ಅಡ್ವಕೇಟ್ ಮುಈನುದ್ದೀನ್ ಸಖಾಫಿ, ಮುನೀರ್ ಫಾಲಿಲಿ, ಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಮುಸ್ತಫಾ ನೆಲ್ಯಾಹುದಿಕೇರಿ ಹಾಗು ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಶಾಫಿ ಸಅದಿ ಸೋಮವಾರಪೇಟೆ ಸ್ವಾಗತಿಸಿ, ವಂದಿಸಿದರು.