ವೀರಾಜಪೇಟೆ, ಜು. 31: ಉದ್ಯಮಕ್ಕೆ ಸಂಬಂಧಪಟ್ಟಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆ ವೀರಾಜಪೆಟೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ. ವೀರಾಜಪೇಟೆ ಕುಕ್ಲೂರು ಗ್ರಾಮದ ಮುಕ್ಕಾಟಿರ ಬನ್ಸಿ ಎಂಬವರು ಬೆಂಗಳೂರಿನಲ್ಲಿ ಉದ್ಯಮವನ್ನು ನಡೆಸುತ್ತಿದ್ದು, ವೀರಾಜಪೇಟೆಯ ಬಡಕಡ ಮುತ್ತಪ್ಪ ಎಂಬವರು ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಈ ಸಂದರ್ಭ ಮಾಲೀಕರ ಸಹಿ ಬಳಸುವ ಮೂಲಕ ಮತ್ತು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವದಾಗಿ ಮಾಲೀಕ ಬನ್ಸಿ ದೂರಿದ್ದಾರೆ. ಈ ಬಗ್ಗೆ ವೀರಾಜಪೇಟೆ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಕ್ರಮಕೈಗೊಂಡಿದ್ದಾರೆ.