ಗೋಣಿಕೊಪ್ಪಲು, ಜು. 31: ಗೋಣಿಕೊಪ್ಪ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀಪವಿರುವ ರಾಜಿತ್ ಎಂಬವರು ತಮ್ಮ ತೋಟದಲ್ಲಿ ಬೆಳೆಸಿದ್ದ ನೇಂದ್ರ ಬಾಳೆಯು ಕೆಲವೇ ತಿಂಗಳಲ್ಲಿ ಫಸಲು ನೀಡುತ್ತಿತ್ತು.

ಆದರೆ 9 ಕಾಡಾನೆ ಒಂದು ಮರಿಯೊಂದಿಗೆ ತೋಟಕ್ಕೆ ಲಗ್ಗೆ ಇಟ್ಟ ಪರಿಣಾಮ ಬಾಳೆ ತೋಟ ಸಂಪೂರ್ಣ ನಾಶವಾಗಿದೆ. ತೋಟಕ್ಕೆ ಅಳವಡಿಸಿದ್ದ ಬೇಲಿ ನೆಲಸಮಗೊಂಡಿದೆ. ಕಳೆದ ಮೂರು ದಿನಗಳಿಂದ ರಾತ್ರಿ ವೇಳೆಯಲ್ಲಿ ರಾಜರೋಷವಾಗಿ ಈ ತೋಟಕ್ಕೆ ಆಗಮಿಸಿ ಫಸಲನ್ನು ಹಾಳು ಮಾಡುತ್ತಿವೆ. ಸುದ್ದಿ ತಿಳಿದ ತಿತಿಮತಿ ಆರಣ್ಯ ಇಲಾಖೆಯ ಆರ್‍ಎಫ್‍ಒ ಅಶೋಕ್ ತಮ್ಮ ಸಿಬ್ಬಂದಿಗಳೊಂದಿಗೆ ತೆರಳಿ ಪರಿಶೀಲಿಸಿದ್ದಾರೆ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕ್ರಮ ವಹಿಸಲಾಗುವದೆಂದು ಭರವಸೆ ನೀಡಿದ್ದಾರೆ. - ಹೆಚ್.ಕೆ.ಜಗದೀಶ್