ನಾಪೋಕ್ಲು, ಜು. 30: ಚೇಲಾವರ ಗ್ರಾಮದ ಕಿರುಂಗೊಳ್ಳಿ ರಸ್ತೆಯನ್ನು ಇದುವರೆಗೆ ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮಪಂಚಾಯಿತಿ ನಿರ್ವಹಣೆ ಮಾಡುತ್ತಿದ್ದು, ಮೂರು ದಿನಗಳ ಒಳಗಾಗಿ ಮರಳು ಹಾಕಿ ಎತ್ತರಿಸಿ ಸಾರ್ವಜನಿಕರ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವದು. ಮಾತ್ರವಲ್ಲದೆ ನಬಾರ್ಡ್‍ನಿಂದ ಶಾಶ್ವತ ಪರಿಹಾರಕ್ಕೆ ರೂ. 30 ಲಕ್ಷ ಮಂಜೂರಾಗಲಿದ್ದು, ಮಳೆಗಾಲ ಕಳೆದ ಬಳಿಕ ಕಾಮಗಾರಿ ಮಾಡಲಾಗುವದು ಎಂದು ಜಿ.ಪಂ.ನ ಅಭಿಯಂತರ ಗವಿಸಿದ್ಧಯ್ಯ ತಿಳಿಸಿದ್ದಾರೆ.