ಕೂಡಿಗೆ, ಜು. 30: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಕೂಡುಮಂಗಳೂರಿನಲ್ಲಿ ನಡೆದಿದೆ. ಕೂಡುಮಂಗಳೂರು ಗ್ರಾಮದ ಬಸವನತ್ತೂರಿನ ಜನತಾ ಕಾಲೋನಿ ನಿವಾಸಿ ರವಿ (24) ಆತ್ಮಹತ್ಯೆಗೆ ಶರಣಾದ ಯುವಕ. ರಾಮಕೃಷ್ಣ ಹಾಗೂ ಗೌರಮ್ಮ ದಂಪತಿಗಳ ಪುತ್ರನಾದ ಈತ ಕೂಲಿ ಕೆಲಸ ಮಾಡಿಕೊಂಡಿದ್ದ. ಮದ್ಯದ ಗುಂಗಿನಲ್ಲಿ ಕೆಲಸದಿಂದ ಹಿಂದಿರುಗಿ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.