ವೀರಾಜಪೇಟೆ, ಜು. 30; ಚಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಣಗೇರಿ ಗ್ರಾಮದ ಐಚಂಡ ಐಯ್ಯಮ್ಮ ಎಂಬವರ ತೋಟದಿಂದ ತಾ. 26ರಂದು ರಾತ್ರಿ ಬೆಲೆಬಾಳುವ ಮರಗಳನ್ನು ಕಳವು ಮಾಡಲಾಗಿದ್ದು ವೀರಾಜಪೇಟೆ ಗ್ರಾಮಾಂತರ ಠಾಣೆ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಕಳ್ಳರು ರಾತ್ರಿ ವೇಳೆಯಲ್ಲಿ ತೋಟದಿಂದ ಅಂದಾಜು ಒಂದು ಲಕ್ಷ ಬೆಲೆಬಾಳುವ ತೇಗದ ಮರವನ್ನು ಕಡಿದು ಒಂದೆರಡು ತುಂಡುಗಳನ್ನು ಕೊಂಡೊಯ್ದಿದ್ದಾರೆ. ಉಳಿದ ತುಂಡುಗಳನ್ನು ಸಾಗಿಸಲು ಸಾಧ್ಯವಾಗದೆ ತೋಟದಲ್ಲಿಯೆ ಬಿಟ್ಟಿದ್ದಾರೆ. ಇತ್ತಿಚಿನÀ ದಿನಗಳಲ್ಲಿ ಗ್ರಾಮದ ಸುತ್ತಮುತ್ತ ಮರ ಕಳ್ಳತನದ ಜತೆಗೆ ದನ ಕಳ್ಳರ ಹಾವಳಿ ಹೆಚ್ಚಾಗಿದ್ದು ಕೂಡಲೇ ಪೋಲಿಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಆರೋಪಿಗಳನ್ನು ಪತ್ತೆ ಹಚ್ಚುವಂತೆ ದೂರಿನಲ್ಲಿ ಕೋರಿದ್ದಾರೆ.