ಮಡಿಕೇರಿ, ಜು.29 : ಜಿಲ್ಲೆಯಲ್ಲಿ ತುಳು ಭಾಷಿಕರ ಕ್ಷೇಮಾಭಿವೃದ್ಧಿಗೆ ಸಹಕಾರ ಸಂಘ ರಚಿಸಲು ಕೊಡಗು ಜಿಲ್ಲಾ ತುಳುವೆರ ಜನಪದ ಕೂಟ ನಿರ್ಧರಿಸಿದೆ.
ಗೋಣಿಕೊಪ್ಪದಲ್ಲಿರುವ ಜನಪದ ಕೂಟದ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಶೇಖರ್ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು.
ಜಿಲ್ಲೆಯ ಮೂರು ತಾಲೂಕು ಸಮಿತಿಗಳು ಹಾಗೂ ಎಲ್ಲಾ ತುಳು ಭಾಷಿಕ ಸಮುದಾಯದ ಪ್ರಮುಖರ ಸಲಹೆ, ಸೂಚನೆಯಂತೆ ಸಭೆ ನಡೆಸಿ ಸಹಕಾರ ಸಂಘಕ್ಕೆ ನೂತನ ಆಡಳಿತ ಮಂಡಳಿಯನ್ನು ರಚಿಸಲು ನಿರ್ಧರಿಸಲಾಯಿತು. ಅತಿ ಹೆಚ್ಚು ಷೇರು ಬಂಡವಾಳ ಹೂಡಿಕೆ ಮಾಡುವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ, ಜಿಲ್ಲಾ ಸಲಹೆಗಾರರಾದ ಐತ್ತಪ್ಪ ರೈ, ಬಾಲಕೃಷ್ಣ ರೈ, ಉಪಾಧ್ಯಕ್ಷ ಆನಂದರಘು, ಸಂಧ್ಯಾಗಣೇಶ್ ರೈ, ಖಜಾಂಚಿ ಮುಕುಂದ, ನಿರ್ದೇಶಕರುಗಳಾದÀ ಪಿ.ಎಸ್.ಮಂಜುನಾಥ್, ಕೆ.ಜಿ.ರಾಮಕೃಷ್ಣ ಹಾಜರಿದ್ದರು.