ಸೋಮವಾರಪೇಟೆ,ಜು.28: ತಾಲೂಕು ಒಕ್ಕಲಿಗರ ಯುವ ವೇದಿಕೆ ಆಶ್ರಯದಲ್ಲಿ ಹೊಸಳ್ಳಿ ಗ್ರಾಮದ ಡಿ.ಈ. ಕುಶಾಲಪ್ಪ ಅವರ ಗದ್ದೆಯಲ್ಲಿ ಆಯೋಜಿಸಲಾಗಿದ್ದ 6ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾಟದಲ್ಲಿ ತಾಕೇರಿ ಸ್ಪೋಟ್ರ್ಸ್ ಕ್ಲಬ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಹೊಸಳ್ಳಿ ಬಿ. ತಂಡ ದ್ವಿತೀಯ ಸ್ಥಾನ ಪಡೆಯಿತು.

ಮಹಿಳೆಯರ ಥ್ರೋಬಾಲ್ ಪ್ರಶಸ್ತಿಯನ್ನು ಭಾಗ್ಯ ಪ್ರೆಂಡ್ಸ್ ಪ್ರಥಮ, ತಾಕೇರಿ ಈಶ್ವÀರಿ ಯುವತಿ ಮಂಡಳಿ ದ್ವಿತೀಯ ಸ್ಥಾನ ಪಡೆಯಿತು. ಹಗ್ಗ ಜಗ್ಗಾಟದಲ್ಲಿ ತಾಕೇರಿ ಈಶ್ವರಿ ತಂಡ(ಪ್ರ), ಅರೆಯೂರು ಮಹಿಳೆಯರ ತಂಡ (ದ್ವಿ) ಸ್ಥಾನ ಪಡೆದವು.

ಪುರುಷರ ವಿಭಾಗದ ಹಗ್ಗ ಜಗ್ಗಾಟದಲ್ಲಿ ಮಲೆನಾಡು ಸಂಘ ಎ(ಪ್ರ), ಅಬ್ಬೂರುಕಟ್ಟೆ ಒಕ್ಕಲಿಗರ ಸಂಘ(ದ್ವಿ) ಸ್ಥಾನ ಪಡೆದವು. ವಾಲಿಬಾಲ್ ಪಂದ್ಯಾಟದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ತಾಕೇರಿ ಸ್ಪೋಟ್ರ್ಸ್ ಕ್ಲಬ್‍ನ ಸುಗಮ್, ಹಗ್ಗ ಜಗ್ಗಾಟದಲ್ಲಿ ಅರೆಯೂರು ಗ್ರಾಮದ ಅರುಣ್ ಹಾಗೂ ಮಹಿಳೆಯರ ಥ್ರೋಬಾಲ್ ಸ್ಪರ್ಧೆಯಲ್ಲಿ ಭಾಗ್ಯ ಪ್ರಶಸ್ತಿ ಪಡೆದರು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಉದ್ಯಮಿ ಹರಪಳ್ಳಿ ರವೀಂದ್ರ, ಅರುಣ್ ಕೊತ್ನಳ್ಳಿ, ಕೊಡಗು ಅಮೇಚೂರ್ ಕಬಡ್ಡಿ ಅಸೋಸಿಯೇಷನ್‍ನ ಮಂಜೂರು ತಮ್ಮಣ್ಣಿ ಪ್ರಮುಖರಾದ ಗಿರೀಶ್ ಮಲ್ಲಪ್ಪ, ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್ ಪಾಲ್ಗೊಂಡಿದ್ದರು.