ಕುಶಾಲನಗರ, ಜು. 29: ಕಾವೇರಿ ನದಿಯ ಸ್ವಚ್ಛತೆ ಕಾಪಾಡುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಶಾಂತಿವೃತಾನಂದ ಜಿ ಮಹಾರಾಜ್ ಕರೆ ನೀಡಿದ್ದಾರೆ.

ಅವರು ಕುಶಾಲನಗರದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಮೈಸೂರು ವಿಭಾಗೀಯ ಸಮ್ಮೇಳನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭ ಕೊಡಗು ಮೈಸೂರು ಗಡಿಭಾಗದ ಕೊಪ್ಪ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಜೀವನದಿ ಕಾವೇರಿ ದಕ್ಷಿಣ ಭಾರತದ ಬಹುತೇಕ ಭಾಗಗಳಿಗೆ ನೀರುಣಿಸುವ ನದಿಯಾಗಿದ್ದು ಇದರ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕು. ಕೋಟಿಗಟ್ಟಲೆ ಜನ, ಜಾನುವಾರುಗಳಿಗೆ ಜೀವಜಲ ಕಲ್ಪಿಸುವ ನದಿಗೆ ಯಾವದೇ ಭಾಗದಲ್ಲಿ ಕೈಗಾರಿಕಾ ಘಟಕಗಳಾಗಲಿ, ವಾಣಿಜ್ಯ ಕೇಂದ್ರಗಳಿಂದ ಮತ್ತಿತರ ಕೇಂದ್ರಗಳಲ್ಲಿ ಸೃಷ್ಟಿಯಾಗುವ ಕಲುಷಿತ ತ್ಯಾಜ್ಯಗಳನ್ನು ನದಿಗೆ ಹರಿಸದಂತೆ ಎಚ್ಚರವಹಿಸಬೇಕು. ನದಿಯ ಪಾವಿತ್ರ್ಯತೆಯನ್ನು ಕಾಪಾಡುವದ ರೊಂದಿಗೆ ನಾಡಿನ ಉದ್ದಗಲಕ್ಕೂ ಜಲಮೂಲಗಳ ಸಂರಕ್ಷಣೆಗೆ ಪಣತೊಡಬೇಕಾಗಿದೆ ಎಂದರು.

ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕÀ ಎಂ.ಎನ್.ಚಂದ್ರಮೋಹನ್, ವಾಸವಿ ಯುವಜನ ಸಂಘದ ಅಧ್ಯಕ್ಷರ ನಾಗಪ್ರವೀಣ್, ಪ್ರಮುಖರಾದ ವೈಶಾಖ್, ವಿ.ಆರ್.ಮಂಜುನಾಥ್, ಬಿ.ಪಿ.ಕೃಷ್ಣಮೂರ್ತಿ, ಆದರ್ಶ್ ಮತ್ತಿತರರು ಇದ್ದರು.