ಸೋಮವಾರಪೇಟೆ, ಜು. 29: ಸೂರ್ಲಬ್ಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ, ಕಿರಗಂದೂರು ಅಂಗನವಾಡಿಯಲ್ಲಿ ಆರೋಗ್ಯವಂತ ಶಿಶುಗಳ ಪ್ರದರ್ಶನ ನಡೆಯಿತು.
ಆರೋಗ್ಯ ಸಹಾಯಕಿ ಸುಶೀಲ ಅವರು ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ಗಳ ಬಗ್ಗೆ ಮಾಹಿತಿ ನೀಡಿದರು. ಗರ್ಭಿಣಿಯರು ಹಸಿರು ತರಕಾರಿ, ಮೊಳಕೆ ಕಾಳುಗಳನ್ನು ಸೇವಿಸುವ ದರಿಂದ ಆರೋಗ್ಯವಂತ ಮಗು ವನ್ನು ಪಡೆಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸರಸ್ವತಿ ಸ್ತ್ರೀಶಕ್ತಿ ಸಂಘದ ಪ್ರತಿನಿಧಿ ರುಕ್ಮಿಣಿ, ಅಂಗವಾಡಿ ಕಾರ್ಯಕರ್ತೆ ಕೆ. ಆರ್. ಚಂದ್ರಿಕಾ ಇದ್ದರು.