ಸಿದ್ದಾಪುರ, ಜು. 28: ಕಳೆದ 30 ವರ್ಷಗಳಿಂದ ವಿದ್ಯುತ್ ಬೆಳಕಿನಿಂದ ವಂಚಿತರಾಗಿದ್ದ ತಿತಿಮತಿಯ ಕಾರೆಕಾಡ್ಲು ಹಾಡಿಗೆ ವಿದ್ಯುತ್ ಬೆಳಕಿನ ಭಾಗ್ಯ ಲಭಿಸಿದೆ. ತಿತಿಮತಿ ಗ್ರಾಮದ ಸಮೀಪವಿರುವ ದೇವರಪುರ ಬಳಿಯ ಕಾರೆಕಾಡ್ಲು ಹಾಡಿಯಲ್ಲಿ ಕಳೆದ 30 ವರ್ಷಗಳಿಂದಲೂ ವಿದ್ಯುತ್ ಬೆಳಕು ಇರಲಿಲ್ಲ. ಇದೀಗ ದೀನ್‍ದಯಾಳ್ ಉಪಾಧ್ಯಾಯ ಯೋಜನೆ ಯಡಿಯಲ್ಲಿ ಬೆಳಕಿನ ಭಾಗ್ಯ ಲಭಿಸಿದೆ.