ಸಿದ್ದಾಪುರ, ಜು. 29: ಬೆಂಗಳೂರಿನಲ್ಲಿ ಕಳ್ಳತನ ಮಾಡಲಾದ ಮೊಬೈಲ್ ಪಡೆದು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪರಾಧ ಪತ್ತೆದಳದ ಪೊಲೀಸರು ಸಿದ್ದಾಪುರದ ಮೊಬೈಲ್ ಅಂಗಡಿಯ ಮಾಲೀಕರು ಸೇರಿದಂತೆ ಕೆಲವರನ್ನು ವಿಚಾರಣೆಗೊಳಪಡಿಸಿದ್ದಾರೆ.
ಸಿದ್ದಾಪುರದ ಬಸ್ ನಿಲ್ದಾಣದಲ್ಲಿರುವ ಮೊಬೈಲ್ ಅಂಗಡಿಯೊಂದರ ಮಾಲೀಕ ಸ್ಥಳೀಯ ಯುವಕನೋರ್ವ ನೀಡಿದ ಸುಮಾರು 30 ಮೊಬೈಲ್ ಫೋನ್ಗಳನ್ನು ಪಡೆದುಕೊಂಡಿದ್ದು, ಎಲ್ಲ ಮೊಬೈಲ್ಗಳು ಕೂಡ ಬೆಂಗಳೂರಿನಿಂದ ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಬೆಂಗಳೂರಿನ ಅಪರಾಧ ಪತ್ತೆದಳ ಸಿದ್ದಾಪುರಕ್ಕೆ ಆಗಮಿಸಿ, ಅಂಗಡಿ ಮಾಲೀಕ, ಮೊಬೈಲ್ ನೀಡಿದ ಯುವಕನನ್ನು ವಶಕ್ಕೆ ಪಡೆದು, ಮುಂದಿನ ಕ್ರಮಕೈಗೊಂಡಿದ್ದಾರೆ.