ಮಡಿಕೇರಿ, ಜು. 28 : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಮೊದಲ ಬಾರಿಗೆ ಕೆಸರು ಗದ್ದೆ ಕ್ರಿಕೆಟ್ ಆಯೋಜಿಸಲಾಗಿತ್ತು. ಬಿಳಿಗೇರಿಯ ತುಂತಜೆ ಚಂದ್ರಶೇಖರ್ ಅವರ ಗದ್ದೆಯಲ್ಲಿ ಪಂದ್ಯಾಟ ಏರ್ಪಡಿಸಲಾಗಿತ್ತು. ಕೆಸರು ಗದ್ದೆಯ ಮಧ್ಯೆ ವಿಕೆಟ್ ನೆಟ್ಟು ಕ್ರಿಕೆಟ್ ಮಾದರಿ ನಿಯಮಗಳನ್ನು ಅಳವಡಿಸಲಾಗಿತ್ತು. ಬಾಲಿಂಗ್‍ನಲ್ಲಿ ಮಾತ್ರ ಕೊಂಚ ಬದಲಾವಣೆ ಮಾಡಲಾಗಿತ್ತು.
ಜಿಲ್ಲಾ ಪತ್ರಕರ್ತರ ಸಂಘ, ಪೆರಾತಾ ಬಾಯ್ಸ್, ಗೌಡ ಫುಟ್ಬಾಲ್ ಅಕಾಡೆಮಿ, ಬಿಳಿಗೇರಿ ಬಾಯ್ಸ್, ಕೂರ್ಗ್ ವಾರಿಯರ್ಸ್, ನರಿಯಂದಡ ಬಾಯ್ಸ್, ದೇವಸ್ತೂರು ಬಾಯ್ಸ್ ತಂಡಗಳು ಪಂದ್ಯಾಟದಲ್ಲಿ ಸೆಣಸಾಡಿದವು. ಒಂದು ತಂಡದಲ್ಲಿ ಏಳುಮಂದಿ ಆಟವಾಡಿದರು.
ಆಟಗಾರರು ಕೆಸರು ಗದ್ದೆಯಲ್ಲಿ ಓಡಿ, ಬಿದ್ದು, ಸಿಕ್ಸ್, ಫೋರ್ ಬಾರಿಸಿ ವೀಕ್ಷಕರಿಗೆ ಮನರಂಜನೆ ನೀಡಿದರು. ಮಹಿಳೆಯರಿಗೆ ಓಟದ ಸ್ಪರ್ಧೆ ಕೂಡ ನಡೆಸಲಾಯಿತು.
ಸಭಾ ಕಾರ್ಯಕ್ರಮ : ತಾ.ಪಂ ಸದಸ್ಯೆ ತುಂತುಜೆ ಕುಮುದಾ ರಶ್ಮಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಗಳು ಪರಸ್ಪರ ಭಾಂದವ್ಯ ವೃದ್ಧಿಸುವ ನಿಟ್ಟಿನಲ್ಲಿ ಸಹಕಾರಿ ಎಂದರು.
ಯುವ ವೇದಿಕೆ ಅಧ್ಯಕ್ಷ ಮನೋಹರ್ ಮಾದಪ್ಪ ಮಾತನಾಡಿ, ಸಂಘಟನೆ ವತಿಯಿಂದ ವಿಭಿನ್ನವಾಗಿ ಕೆಸರುಗದ್ದೆ ಕ್ರಿಕೆಟ್ ಪಂದ್ಯಾಟ ಏರ್ಪಡಿಸಿದ್ದು, ನಿರಂತರವಾಗಿ ಕೆಸರು ಗದ್ದೆ ಕ್ರಿಕೆಟ್ ಆಯೋಜಿಸುವ ಇಂಗಿತ ವ್ಯಕ್ತಪಡಿಸಿದರು.
ಈ ಸಂದರ್ಭ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಕೊಡಗು ಗೌಡ ಸಾಂಸ್ಕøತಿಕ ಅಕಾಡೆಮಿ ಮಾಜಿ ಅಧ್ಯಕ್ಷ ತುಂತಜೆ ಗಣೇಶ್, ಪ್ರಚಾರ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್, ಸ್ಥಳದಾನಿ ತುಂತಜೆ ಚಂದ್ರಶೇಖರ್, ಪೆರಾತ ಯುವಕ ಸಂಘದ ಅಧ್ಯಕ್ಷ ಬಾಳಾಡಿ ದಿಲೀಪ್, ಬೆಳೆಗಾರ ಬಾಳಾಡಿ ಬೋಪಯ್ಯ ಕಾರ್ಯದರ್ಶಿ ಕಟ್ಟೆಮನೆ ರೋಶನ್, ಖಜಾಂಚಿ ನೆಯ್ಯಣಿ ಸಂಜು, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ, ಆಹಾರ ಸಮಿತಿ ಅಧ್ಯಕ್ಷ ಪರಿಚನ ಸತೀಶ್, ಶಿಸ್ತು ಸಮಿತಿ ಅಧ್ಯಕ್ಷ ಪೊಕ್ಕುಳಂಡ್ರ ಮನೋಜ್, ಹಿರಿಯ ಸಲಹೆಗಾರ ಯಾಲದಾಳು ಹರೀಶ್ ಸೇರಿದಂತೆ ನಿರ್ದೇಶಕರುಗಳು ಇದ್ದರು.