ಕೂಡಿಗೆ, ಜು. 28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯದ ಹೊಸಗುತ್ತಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 50,000 ರೂಪಾಯಿ ಡಿಡಿ ಯನ್ನು ತಾಲೂಕು ಯೋಜನಾಧಿಕಾರಿ ಪ್ರಕಾಶ್ ವೈ ಅವರು ವಿತರಣೆ ಮಾಡಿದರು.

ಹಣವನ್ನು ದೇವಸ್ಥಾನದ ಪ್ರಗತಿ ಕಾರ್ಯಗಳಿಗೆ ಧರ್ಮಸ್ಥಳದಿಂದ ಪೂಜ್ಯರು ಮಂಜೂರು ಮಾಡಿದ್ದಾರೆ ಎಂದು ಪ್ರಕಾಶ್ ತಿಳಿಸಿದರು. ದೇವಸ್ಥಾನದ ಅಧ್ಯಕ್ಷ ಜಿತೇಂದ್ರ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹಲವು ಸಹಕಾರಗಳನ್ನು ಮಾಡುತ್ತಿದ್ದು, ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ವಲಯದ ಮೇಲ್ವಿಚಾರಕ ವಿನೋದ್‍ಕುಮಾರ್ ಮಾತನಾಡಿ, ಹೆಬ್ಬಾಲೆ ವಲಯದಲ್ಲಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ದೇವಸ್ಥಾನಗಳಿಗೆ ಅನುದಾನವನ್ನು ನೀಡಲಾಗಿದೆ ಎಂದರು. ಈ ಸಂದರ್ಭ ಗ್ರಾಮಸ್ಥರಾದ ನಸೀಮಾ ಮಜೀದ್, ಸತೀಶ್, ಸತ್ಯಪ್ರಕಾಶ್, ಚಂದ್ರಪ್ಪ, ಶಿವಪ್ಪ, ಈರಪ್ಪ, ಮುತ್ತಪ್ಪ, ಉದಯಕುಮಾರ್ ಹಾಗು ಸೇವಾಪ್ರತಿನಿಧಿ ಮೀನಾಕ್ಷಿ ಇದ್ದರು.