ಶ್ರೀಮಂಗಲ, ಜು. 29 : ಪೆÇನ್ನಂಪೇಟೆ-ಶ್ರೀಮಂಗಲ ರಸ್ತೆ ನಡುವೆ ಹುದಿಕೇರಿಯಲ್ಲಿ ಕೇರಳ ರಾಜ್ಯದ ಎರಡು ಕಾರುಗಳ ನಡುವೆ ಅಪಘಾತವಾಗಿದ್ದು, ಎರಡು ಕಾರಿನಲ್ಲಿ ಏರ್ ಬ್ಯಾಗ್‍ಗಳು ತೆರೆದುಕೊಂಡ ಪರಿಣಾಮ ಯಾವದೇ ಗಂಭೀರ ಗಾಯ ಉಂಟಾಗದೆ ಕಾರು ಚಾಲಕರು ಪಾರಾಗಿದ್ದಾರೆ.
ಹುದಿಕೇರಿ ಕೊಡವ ಸಮಾಜದ ಬಳಿ ಗೋಣಿಕೊಪ್ಪಲುವಿನಿಂದ ಕೇರಳದ ಕಡೆಗೆ ಹೋಗುತ್ತಿದ್ದ ಹುಂಡೈ ವರ್ನಾ ಕಾರು ಮತ್ತು ಶ್ರೀಮಂಗಲದಿಂದ ಗೋಣಿಕೊಪ್ಪಲು ವಿನ ಕಡೆಗೆ ಹೋಗುತ್ತಿದ್ದ ಫೆÇೀರ್ಡ್ ಫಿಗೋ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಿಂದ ಎರಡೂ ಕಾರುಗಳಿಗೂ ಹಾನಿಯಾಗಿದೆ. ಎರಡು ಕಡೆಯವರು ರಾಜಿ ಮಾಡಿಕೊಂಡ ಹಿನ್ನೆಲೆಯಲ್ಲಿ ಪೆÇಲೀಸ್ ದೂರು ದಾಖಲಾಗಿಲ್ಲ. ಎರಡು ಕಾರುಗಳು ಕೇರಳ ನೋಂದಣಿ ಹೊಂದಿದೆ. ಅಪಘಾತದಿಂದ ಹುದಿಕೇರಿ ಕೊಡವ ಸಮಾಜದ ತಡೆಗೋಡೆಗೆ ಹಾನಿಯಾಗಿದೆ.