ನಾಪೋಕ್ಲು, ಜು. 27: ಸ್ಥಳೀಯ ಅಂಕುರ್ ಪಬ್ಲಿಕ್ ಶಾಲೆಯಲ್ಲಿ ಬ್ರಹ್ಮಗಿರಿ ಸಹೋದಯ ವತಿಯಿಂದ ಅಂತರ ಶಾಲಾ ಕೆಸರುಗದ್ದೆ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕ್ರೀಡಾ ಕೂಟದಲ್ಲಿ ಥ್ರೋಬಾಲ್, ಫುಟ್‍ಬಾಲ್, ರಿಲೆ ಹಾಗೂ 100 ಮೀ. ಓಟದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ರಾಜಾ ಚರ್ಮಣ ಹಾಗೂ ಕಾರ್ಯದರ್ಶಿ ರತ್ನಚರ್ಮಣ ವಹಿಸಿದ್ದರು. ಕ್ರೀಡಾಕೂಟದಲ್ಲಿ ಅಂಕುರ್ ಪಬ್ಲಿಕ್ ಶಾಲೆ, ಎಸ್‍ಎಂಎಸ್, ಭಾರತೀಯ ವಿದ್ಯಾಭವನ ಕ್ರೆಸೆಂಟ್ ಹಾಗೂ ಸೈನಿಕ್ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ರತ್ನ ಚರ್ಮಣ ಉದ್ಘಾಟಿಸಿದರು. ಬಳಿಕ ಕ್ರೀಡಾ ಸ್ಪರ್ಧೆಗಳು ಜರುಗಿದವು. 100 ಮೀ. ಓಟದ ಸ್ಪರ್ಧೆಯಲ್ಲಿ ಕಿರಿಯ ಬಾಲಕಿಯರ ವಿಭಾಗದಲ್ಲಿ ಎಸ್‍ಎಂಎಸ್ ಪ್ರಥಮ ಸ್ಥಾನವನ್ನು, ಭಾರತೀಯ ವಿದ್ಯಾಭವನ ದ್ವಿತೀಯ ಸ್ಥಾನವನ್ನು ಗಳಿಸಿತು. 100 ಮೀ. ಓಟದ ಸ್ಪರ್ಧೆಯಲ್ಲಿ ಸೀನಿಯರ್ ಬಾಲಕಿಯರ ವಿಭಾಗದಲ್ಲಿ ಭಾರತೀಯ ವಿದ್ಯಾಭವನ ಪ್ರಥಮ ಸ್ಥಾನವನ್ನು ನ್ಯಾಷನಲ್ ಅಕಾಡೆಮಿ ದ್ವಿತೀಯ ಸ್ಥಾನವನ್ನು ಗಳಿಸಿತು. ಕಿರಿಯ ಬಾಲಕರ ವಿಭಾಗದಲ್ಲಿ ಸೈನಿಕ್ ಶಾಲೆ ಪ್ರಥಮ ಸ್ಥಾನವನ್ನು ನ್ಯಾಷನಲ್ ಅಕಾಡೆಮಿ ದ್ವಿತೀಯ ಸ್ಥಾನವನ್ನು ಪಡೆಯಿತು. ಹಿರಿಯ ಬಾಲಕರ ವಿಭಾಗದಲ್ಲಿ 100 ಮೀ. ಓಟದ ಸ್ಪರ್ಧೆಯಲ್ಲಿ ಸೈನಿಕ್ ಶಾಲೆ ಪ್ರಥಮ ಸ್ಥಾನವನ್ನು ಎಸ್‍ಎಂಎಸ್ ದ್ವಿತೀಯ ಸ್ಥಾನವನ್ನು ಗಳಿಸಿತು. ಥ್ರೋಬಾಲ್ ಸ್ಪರ್ಧೆಯಲ್ಲಿ ಭಾರತೀಯ ವಿದ್ಯಾಭವನ ಪ್ರಥಮ ಸ್ಥಾನ ಗಳಿಸಿದರೆ ಅಂಕುರ್ ಪಬ್ಲಿಕ್ ಶಾಲೆ ದ್ವಿತೀಯ ಸ್ಥಾನವನ್ನು ಗಳಿಸಿತು. ಫುಟ್‍ಬಾಲ್ ಸ್ಪರ್ಧೆಯಲ್ಲಿ ಭಾರತೀಯ ವಿದ್ಯಾಭವನ ಪ್ರಥಮ ಸ್ಥಾನವನ್ನು ಹಾಗೂ ಎಸ್‍ಎಂಎಸ್ ದ್ವಿತೀಯ ಸ್ಥಾನವನ್ನು ಗಳಿಸಿತು. ಹಿರಿಯ ಬಾಲಕರ ರಿಲೆ ಸ್ಪರ್ಧೆಯಲ್ಲಿ ಎಸ್‍ಎಂಎಸ್ ವಿಜೇತರಾದರೆ ಭಾರತೀಯ ವಿದ್ಯಾಭವನ ರನ್ನರ್‍ಅಪ್ ಪ್ರಶಸ್ತಿ ಗಳಿಸಿತು. ತೃತೀಯ ಸ್ಥಾನ ಸೈನಿಕ್ ಶಾಲೆಯ ಪಾಲಾಯಿತು. ಹಿರಿಯ ಬಾಲಕಿಯರ ರಿಲೆ ಸ್ಪರ್ಧೆ ಯಲ್ಲಿ ಎಸ್‍ಎಂಎಸ್ ವಿಜಯ ಗಳಿಸಿದರೆ ನ್ಯಾಷನಲ್ ಅಕಾಡೆಮಿ ರನ್ನರ್ಸ್ ಪ್ರಶಸ್ತಿ ಪಡೆಯಿತು. ಕಿರಿಯ ಬಾಲಕರ ವಿಭಾಗದಲ್ಲಿ ಎಸ್. ಎಂ.ಎಸ್. ವಿಜಯ ಗಳಿಸಿದರೆ ಅಂಕುರ್ ಪಬ್ಲಿಕ್ ಶಾಲೆ ರನ್ನರ್ ಪ್ರಶಸ್ತಿ ಪಡೆಯಿತು. ನ್ಯಾಷನಲ್ ಅಕಾಡೆಮಿ ತೃತೀಯ ಸ್ಥಾನ ಪಡೆಯಿತು. ಹಿರಿಯ ಬಾಲಕಿಯರ ವಿಭಾಗದಲ್ಲಿ ಎಸ್ ಎಂಎಸ್ ವಿಜಯಗಳಿಸಿದರೆ ಭಾರ ತೀಯ ವಿದ್ಯಾಭವನ ರನ್ನರ್ಸ್ ಪ್ರಶಸ್ತಿ ಗಳಿಸಿತು. ಅಂಕುರ್ ಪಬ್ಲಿಕ್ ಶಾಲೆ ತೃತೀಯ ಸ್ಥಾನ ಪಡೆಯಿತು. ಸಮಗ್ರ ಪ್ರಶಸ್ತಿಯನ್ನು ಎಸ್‍ಎಂಎಸ್ ಗಳಿಸಿತು.