ಸೋಮವಾರಪೇಟೆ, ಜು. 27: ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಒಳಗೊಂಡಂತೆ ನೂತನವಾಗಿ ಹಿತರಕ್ಷಣಾ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಮಾದಾಪುರದ ವಿಎಸ್ಎಸ್ಎನ್ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಪ್ರಮುಖರು, ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಒಳಗೊಂಡಂತೆ ಸಭೆ ನಡೆಸಿ ಹಿತರಕ್ಷಣಾ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರನ್ನಾಗಿ ಜಿ.ಪಂ. ಮಾಜೀ ಸದಸ್ಯ ಟಿ.ಪಿ. ಸಂದೇಶ್, ಉಪಾಧ್ಯಕ್ಷರ ನ್ನಾಗಿ ಕುಂಬೂರು ಸೋಮಪ್ಪ, ಇಗ್ಗೋಡ್ಲಿನ ಎಂ.ಎ. ಮಜೀದ್, ಹಾಡಗೇರಿಯ ಬೆಳ್ಯಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಜಂಬೂರಿನ ಅಬ್ದುಲ್ ನಾಸಿರ್, ಕಾರ್ಯದರ್ಶಿಯಾಗಿ ಮೂವತ್ತೊಕ್ಲಿನ ನಾಗಂಡ ಭವಿನ್, ಖಜಾಂಚಿಯಾಗಿ ಜಂಬೂರಿನ ಕೆ.ಎ. ಲತೀಫ್, ಗೌರವ ಅಧ್ಯಕ್ಷರನ್ನಾಗಿ ಇಗ್ಗೋಡ್ಲಿನ ಚರ್ಮಣ್ಣ ಅವರುಗಳನ್ನು ಆಯ್ಕೆ ಮಾಡಲಾಯಿತು. ವಿವಿಧ ಗ್ರಾಮಗಳಿಂದ ಒಟ್ಟು 21 ಮಂದಿಯನ್ನು ಹಿತರಕ್ಷಣಾ ಸಮಿತಿಯ ಸದಸ್ಯರುಗಳ ನೇಮಕ ಮಾಡಲಾಯಿತು.