ಕುಶಾಲನಗರ, ಜು. 27: ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸಿ.ಸಿ.ರಾಘವಯ್ಯ, ಉಪಾಧ್ಯಕ್ಷರಾಗಿ ಬೋಸ್ ಮೊಣ್ಣಪ್ಪ ಆಯ್ಕೆಯಾಗಿದ್ದಾರೆ.

ಸಂಘದ ಮಹಾಸಭೆಯಲ್ಲಿ ನಿರ್ಗಮಿತ ಅಧ್ಯಕ್ಷ ಡಿ.ಕೆ.ಬೊಮ್ಮಯ್ಯ ಹಾಗೂ ಸ್ಥಾಪಕ ಸದಸ್ಯರು ಹಾಗೂ ಹಿರಿಯ ಸಲಹೆಗಾರರಾದ ಎಂ.ಎಚ್.ನಜೀರ್ ಅಹಮ್ಮದ್ ಸಮ್ಮುಖದಲ್ಲಿ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಸಂಘದ ಕಾರ್ಯದರ್ಶಿಯಾಗಿ ಅಬ್ರಹಾಂ ದಿವಾಕರ್, ಜಂಟಿ ಕಾರ್ಯದರ್ಶಿಯಾಗಿ ಸಿ.ವಿ.ಸಾವಿತ್ರಿ, ಕೋಶಾಧಿಕಾರಿಯಾಗಿ ಕೆ.ಎ.ನಾಣಯ್ಯ, ನಿರ್ದೇಶಕರುಗಳಾಗಿ ಟಿ.ಡಿ.ಸೋಮಣ್ಣ, ಎಸ್.ಎಂ.ರಾಜಶೇಖರ್, ಟಿ.ಎನ್.ಪಾರ್ವತಿ, ಎಸ್.ಬಿ.ಗಣಪತಿ, ಸಿ.ಆರ್.ಬಸವರಾಜು, ಬಿ.ಎಸ್.ಗಣೇಶ್, ಟಿ.ಎನ್.ಜಯರಾಮ್, ಸಿ.ಎ.ಪಾರ್ವತಿ, ಸಿ.ಎ.ಕಾವೇರಮ್ಮ, ಕೆ.ಜಿ.ಉತ್ತಯ್ಯ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ