ನಾಪೋಕ್ಲು, ಜು. 27: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ವೀರಾಜಪೇಟೆ ಮಡಿಕೇರಿ ವತಿಯಿಂದ ನೂತನ ಸೇವಾಪ್ರತಿನಿಧಿ ಗಳಿಗೆ ಪ್ರಥಮ ಹಂತದ ತರಬೇತಿ ಕಾರ್ಯಾಗಾರ ವೀರಾಜಪೇಟೆಯ ಆಂಜನೇಯ ಸ್ವಾಮಿ ಸಭಾಭವನದಲ್ಲಿ ಜರುಗಿತು. ಕಾರ್ಯಾಗಾರವನ್ನು ಕೊಡಗು ಜಿಲ್ಲಾ ನಿರ್ದೇಶಕ ಡಾ. ಯೋಗೀಶ್ ಉದ್ಘಾಟಿಸಿದರು. ತಾಲೂಕು ಯೋಜನಾಧಿಕಾರಿ ಸದಾಶಿವಗೌಡ ಯೋಜನೆಯ ತಾಂತ್ರಿಕ ಸಿಬ್ಬಂದಿಗಳಾದ ಚೇತನ್, ಜಯಂತಿ, ಹಾಗೂ ಜಯಶ್ರೀ ಇದ್ದರು. ಕಾರ್ಯಾಗಾರದಲ್ಲಿ ತಾಲೂಕಿನ 13 ಮಂದಿ ಸೇವಾಪ್ರತಿನಿಧಿಗಳು ಪಾಲ್ಗೊಂಡಿದ್ದರು.