ಕುಶಾಲನಗರ, ಜು. 27: ಕುಶಾಲನಗರ ಆರ್ಯವೈಶ್ಯ ಮಂಡಳಿಯ ನೂತನ ಪದಾದಿಕಾರಿಗಳ ಪದಗ್ರಹಣ ಸಮಾರಂಭ, ಮೈಸೂರು ವಿಭಾಗೀಯ ಸಮ್ಮೇಳನ ತಾ.28 ರಂದು (ಇಂದು) ನಡೆಯಲಿದೆ.
ಬೆಳಗ್ಗೆ 9.50 ಕ್ಕೆ ಆರ್ಯವೈಶ್ಯ ಮಂಡಳಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಲಿದೆ. 10.30 ಕ್ಕೆ ಮೈಸೂರು ವಿಭಾಗೀಯ ಸಮ್ಮೇಳನ ನಡೆಯಲಿದ್ದು, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ ಅಧ್ಯಕ್ಷತೆ ವಹಿಸುವರು. ಅಖಿಲ ಭಾರತ ಆರ್ಯವೈಶ್ಯ ಮಹಾಸಭಾ ಒಕ್ಕೂಟದ ಅಧ್ಯಕ್ಷ ಆರ್.ಪಿ. ರವಿಶಂಕರ್ ಸಮ್ಮೇಳನವನ್ನು ಉದ್ಘಾಟಿಸುವರು ಎಂದು ನಿಯೋಜಿತ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ವಿ.ಪಿ.ನಾಗೇಶ್ ತಿಳಿಸಿದ್ದಾರೆ.