ಸುಂಟಿಕೊಪ್ಪ, ಜು. 27: ನಾರ್ಗಾಣೆ ಗ್ರಾಮದ ಶ್ರೀದೇವಿ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಶಿಶು ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಶ್ರೀದೇವಿ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾದ ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ.ಸದಸ್ಯರಾದ ನಾಗರತ್ನ ವಹಿಸಿದ್ದರು.
ಶಿಶು ಆರೋಗ್ಯದ ಬಗ್ಗೆ ಆರೋಗ್ಯ ಕಾರ್ಯಕರ್ತೆಯರಾದ ವಿಕ್ಟೋರಿಯ ಹಾಗೂ ಮಾಯಮ್ಮ ಮಕ್ಕಳ ಮತ್ತು ತಾಯಂದಿರ ಹಾರೈಕೆ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ಆಶಾ ಕಾರ್ಯಕರ್ತೆ ತೈಸಿಯಮ್ಮ ಹಾಗೂ ಸ್ವಾತಿ ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಕಡ್ಲೆಮನೆ ರತಿ ಪ್ರಾರ್ಥಿಸಿ, ಅಂಗನವಾಡಿ ಕಾರ್ಯಕರ್ತೆ ತಾಹಿರ ಸ್ವಾಗತಿಸಿದರು.