ಸುಂಟಿಕೊಪ್ಪ, ಜು.26: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗದ್ದೆಹಳ್ಳ ಹಾಗೂ ಕೆದಕಲ್ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳ ನೇಮಕ ಗೊಳಿಸಲಾಯಿತು.

ರಾಮಮಂದಿರದಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ನಾಗರತ್ನ ಸುರೇಶ್, ಉಪಾಧ್ಯಕ್ಷರಾಗಿ ಆನಂದ ಗದ್ದೆಹಳ್ಳ, ಕಾರ್ಯದರ್ಶಿ ಯಾಗಿ ಕುಸುಮ, ಜಂಟಿ ಕಾರ್ಯದರ್ಶಿಯಾಗಿ ಸಿಂಧುಶ್ರೀ, ಕೋಶಾಧಿಕಾರಿಯಾಗಿ ಬೇಬಿ ಜಾರ್ಜ್ ಅವರನ್ನು ಆಯ್ಕೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಸಂಘದ ಯೋಜನಾಧಿಕಾರಿ ವೈ ಪ್ರಕಾಶ್, ಮೇಲ್ವಿಚಾರಕರಾದ ಕಾಂತಿಕಾ ಮಣಿ ಹಾಗೂ ಒಕ್ಕೂಟದ ಸೇವಾ ಪ್ರತಿನಿಧಿ ಜ್ಯೋತಿಲಕ್ಷ್ಮಿ ಹಾಜರಿದ್ದರು.