ಮಡಿಕೇರಿ, ಜು. 26: ಕೊಡಗು ಗೌಡ ಯುವ ವೇದಿಕೆಯಿಂದ ಇದೇ ಪ್ರಥಮ ಬಾರಿಗೆ ಹಮ್ಮಿಕೊಂಡಿರುವ ವಿನೂತನ ಕೆಸರುಗದ್ದೆ ಕ್ರಿಕೆಟ್ ಪಂದ್ಯಾವಳಿ ತಾ. 28ರಂದು ಬಿಳಿಗೇರಿಯಲ್ಲಿ ನಡೆಯಲಿದೆ.
ಕೆಸರುಗದ್ದೆ, ಕೃಷಿ ಚಟುವಟಿಕೆ ಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಮೈದಾನದಲ್ಲಿನ ಪಂದ್ಯಾವಳಿ, ಇಂಟರ್‍ನೆಟ್ ಆಟಗಳಲ್ಲಿ ಯುವ ಪೀಳಿಗೆ ತಲ್ಲೀನರಾಗಿರುವ ಇಂದಿನ ಕಾಲಘಟ್ಟದಲ್ಲಿ ಯುವ ಪೀಳಿಗೆಯಲ್ಲಿ ಕೆಸರು ಗದ್ದೆ ಆಟೋಟ, ಕೃಷಿ ಚಟುವಟಿಕೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ವಿನೂತನ ಪ್ರಯತ್ನಕ್ಕೆ ಯುವ ವೇದಿಕೆ ಮುಂದಾಗಿದ್ದು, ತಾ. 28ರಂದು ಬಿಳಿಗೇರಿಯ ತುಂತಜೆ ಚಂದ್ರಶೇಖರ್ ಅವರಿಗೆ ಸೇರಿದ ಗದ್ದೆಯಲ್ಲಿ ಪಂದ್ಯಾವಳಿ ನಡೆಯಲಿದೆ.
ಇಂದು ನಡೆದ ಯುವ ವೇದಿಕೆ ಸಭೆಯಲ್ಲಿ ಪಂದ್ಯಾವಳಿಯ ರೂಪುರೇಷೆ ಬಗ್ಗೆ ಚರ್ಚೆ ನಡೆಸಲಾಗಿದ್ದು, 7 ಆಟಗಾರರನ್ನೊಳಗೊಂಡ ಒಟ್ಟು 8 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
ಪೆರಾತ ಬಾಯ್ಸ್, ಗೌಡ ಫುಟ್ಬಾಲ್ ಅಕಾಡೆಮಿ, ಬಿಳಿಗೇರಿ ಬಾಯ್ಸ್, ಕೂರ್ಗ್ ವಾರಿಯರ್ಸ್, ನರಿಯಂದಡ ಬಾಯ್ಸ್, ಪ್ರೆಸ್‍ಬಾಯ್ಸ್, ದೇವಸ್ತೂರು ಬಾಯ್ಸ್ ತಂಡಗಳು ಸೆಣಸಾಡಲಿವೆ.
ಬೆಳಿಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ಅತಿಥಿಗಳಾಗಿ ತಾ.ಪಂ. ಸದಸ್ಯೆ ತುಂತಜೆ ಕುಮುದಾ ರಶ್ಮಿ, ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಕೊಡಗು ಗೌಡ ಸಾಂಸ್ಕøತಿಕ ಅಕಾಡೆಮಿ ಮಾಜಿ ಅಧ್ಯಕ್ಷ ತುಂತಜೆ ಗಣೇಶ್, ಸ್ಥಳದಾನಿ ತುಂತಜೆ ಚಂದ್ರಶೇಖರ್, ಪೆರಾತ ಯುವಕ ಸಂಘದ ಅಧ್ಯಕ್ಷ ಬಾಳಾಡಿ ದಿಲೀಪ್, ಬೆಳೆಗಾರ ಬಾಳಾಡಿ ಬೋಪಯ್ಯ ಇತರರು ಪಾಲ್ಗೊಳ್ಳಲಿದ್ದಾರೆ.
ಪೈಕೇರ ಮನೋಹರ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯದರ್ಶಿ ಕಟ್ಟೆಮನೆ ರೋಶನ್, ಖಜಾಂಚಿ ನೆಯ್ಯಣಿ ಸಂಜು, ಕ್ರೀಡಾಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ, ಆಹಾರ ಸಮಿತಿ ಅಧ್ಯಕ್ಷ ಪರಿಚನ ಸತೀಶ್, ಶಿಸ್ತು ಸಮಿತಿ ಅಧ್ಯಕ್ಷ ಪೊಕ್ಕುಳಂಡ್ರ ಮನೋಜ್, ಹಿರಿಯ ಸಲಹೆಗಾರ ಯಾಲದಾಳು ಹರೀಶ್ ಸೇರಿದಂತೆ ನಿರ್ದೇಶಕರುಗಳು ಹಾಜರಿದ್ದರೆಂದು ಪ್ರಚಾರ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.