ಶ್ರೀಮಂಗಲ, ಜು. 26 : ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆ ತಾ. 29ರಿಂದ ನಡೆಯಲಿದೆ. ಮಂಚಳ್ಳಿ ಗ್ರಾಮದ ವಾರ್ಡ್ ಸಭೆ ತಾ. 29ರಂದು ಪೂರ್ವಾಹ್ನ 11 ಗಂಟೆಗೆ ಗ್ರಾ.ಪಂ. ಸದಸ್ಯೆ ಟಿ.ಎನ್. ರುಕ್ಮಿಣಿ ಅವರ ಅಧ್ಯಕ್ಷತೆಯಲ್ಲಿ ಮಂಚಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಕುಟ್ಟ ಪಟ್ಟಣ ವ್ಯಾಪ್ತಿಯ ಮೊದಲನೇ ಹಾಗೂ ಎರಡನೇ ನಾತಂಗಾಲ, ಬೆಟ್ಟದಾಡಿ ಮತ್ತು ಕುಟ್ಟ ವ್ಯಾಪ್ತಿಯ ವಾರ್ಡ್ ಸಭೆ ತಾ. 30 ರಂದು ಪೂರ್ವಾಹ್ನ 11 ಗಂಟೆಗೆ ಗ್ರಾ.ಪಂ. ಸದಸ್ಯೆ ಯೋಗರಾಣಿ ಅವರ ಅಧ್ಯಕ್ಷತೆಯಲ್ಲಿ ಮೊದಲನೇ ನಾತಂಗಾಲ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ.

ತೈಲಾ ಗ್ರಾಮದ ವಾರ್ಡ್ ಸಭೆ ತಾ. 30 ರಂದು ಅಪರಾಹ್ನ 2:30ಕ್ಕೆ ಗ್ರಾ.ಪಂ. ಸದಸ್ಯೆ ಎ. ರೋಸಿಲಿ ಅವರ ಅಧ್ಯಕ್ಷತೆಯಲ್ಲಿ ಬೇರು ಕೊಲ್ಲಿ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ. ಸಿಂಕೋನ ಕಾಲೋನಿಯ ವಾರ್ಡ್ ಸಭೆ ತಾ. 31ರಂದು ಪೂರ್ವಾಹ್ನ 11:00 ಗಂಟೆಗೆ ಗ್ರಾ.ಪಂ. ಅಧ್ಯಕ್ಷ ಟಿ.ಜೆ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಸಿಂಕೋನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಪೂಜೆಕಲ್ಲು ವಾರ್ಡ್ ಸಭೆಯು ತಾ. 31ರಂದು ಅಪರಾಹ್ನ 2:30ಕ್ಕೆ ಗ್ರಾ.ಪಂ. ಸದಸ್ಯ ಕೆ.ಬಿ. ರಂಜಿತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪೂಜೆಕಲ್ಲುವಿನಲ್ಲಿ ನಡೆಯಲಿದೆ ಎಂದು ಕುಟ್ಟ ಗ್ರಾಮ ಪಂಚಾಯಿತಿ ಪ್ರಕಟಣೆ ತಿಳಿಸಿದೆ.