ಮಡಿಕೇರಿ, ಜು. 26: ಮಡಿಕೇರಿಯ ಕ್ಲಬ್ ಮಹೀಂದ್ರ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಗರದ ಮಾನವೀಯ ಸ್ನೇಹಿತರ ಒಕ್ಕೂಟ ಹಾಗೂ ಹಿತರಕ್ಷಣಾ ವೇದಿಕೆಗಳ ಸಹಯೋಗದಲ್ಲಿ ಇಂದು ಮಡಿಕೇರಿಯ ಕೂರ್ಗ್ ಕಮ್ಯೂನಿಟಿ ಹಾಲ್‍ನಲ್ಲಿ ಆಯ್ದ ಬಡ ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಪಠ್ಯಪರಿಕರಗಳನ್ನು ವಿತರಿಸಲಾಗುವದು.
ಇಂದು ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತ ಎಂ.ಇ. ಮಹಮದ್ ವಹಿಸಲಿದ್ದು, ಕ್ಲಬ್ ಮಹೀಂದ್ರದ ಅಧಿಕಾರಿಗಳಾದ ಕಾರ್ತಿಕೇಯನ್, ನವೀನ್ ನೊರೋನಾ, ಅರುಣ್ ಹಾಗೂ ಮಡಿಕೇರಿ ನಗರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರವಿಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಒಕ್ಕೂಟದ ಪ್ರಕಟಣೆ ತಿಳಿಸಿದೆ.