ಮಡಿಕೇರಿ, ಜು. 26: ಕೊಡಗಿನ ಸಾಂಸ್ಕøತಿಕ ಹಿನ್ನೆಲೆಯನ್ನು ಬಿಂಬಿಸುವ ‘‘ನಂದನವನದೊಳು’’ ಕನ್ನಡ ಸಿನಿಮಾವನ್ನು ಇಲ್ಲಿನ ಕಾವೇರಿ ಮಹಲ್ ಚಿತ್ರಮಂದಿರದಲ್ಲಿ ಇಂದು ಬಿಡುಗಡೆಯೊಂದಿಗೆ ಪ್ರದರ್ಶಿಸಿಲ್ಲ ಎಂದು ಆರೋಪಿಸಿ, ಸ್ಥಳೀಯ ದೇಶಪ್ರೇಮಿ ಯುವಕ ಸಂಘ ಹಾಗೂ ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಚಿತ್ರಪ್ರೇಮಿಗಳು ಪ್ರತಿಭಟನೆ ನಡೆಸಿದರು. ಇಂದು ಎಲ್ಲೆಡೆ ಬಿಡುಗಡೆ ಗೊಂಡಿರುವ ಈ ಸಿನಿಮಾವನ್ನು ಬೆಳಗಿನ ಪ್ರದರ್ಶನದಲ್ಲಿ ತಾಂತ್ರಿಕ ತೊಂದರೆಯಿಂದಷ್ಟೇ ಪ್ರೇಕ್ಷಕರಿಗೆ ವೀಕ್ಷಿಸಲು ಅವಕಾಶವಾಗಲಿಲ್ಲವೆಂದು ಚಿತ್ರಮಂದಿರ ಮೂಲಕ ಬಸವರಾಜ್ ಸಮಜಾಯಿಷಿಕೆ ನೀಡಿದ್ದಾರೆ.
ಅಲ್ಲದೆ, ಮಧ್ಯಾಹ್ನದ ಬಳಿಕ ನಂದನವನದೊಳು ಸಿನಿಮಾ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಪ್ರತಿಭಟನೆ ವೇಳೆ ವಿವಿಧ ಸಂಘಟನೆ ಪ್ರಮುಖರಾದ ಮಂಡೇಟಿರ ಅನಿಲ್, ಅರುಣ್ ಶೆಟ್ಟಿ, ಶೇಖರ್, ಪ್ರತೀಕ್ಷ, ಶೋಭ, ಸಂಜಯ್, ಜಗದೀಶ್ ಮೊದಲಾದವರು ನೇತೃತ್ವ ವಹಿಸಿದ್ದರು. ಮಧ್ಯಾಹ್ನ ಬಳಿಕ ಕನ್ನಡಚಿತ್ರ ಪ್ರದರ್ಶಿಸದಿದ್ದರೆ ಚಿತ್ರಮಂದಿರಕ್ಕೆ ಬೀಗ ಜಡಿಯುವ ಬೆದರಿಕೆವೊಡ್ಡಿದ್ದರು.