ವೀರಾಜಪೇಟೆ, ಜು. 26: ವಿಶ್ವ ಜನಸಂಖ್ಯೆಯಲ್ಲಿ ನಾಲ್ಕನೆ ಒಂದು ಭಾಗ ಭಾರತ ದೇಶದಲ್ಲಿದೆ ಇಂದು ಜನಸಂಖ್ಯೆಯು ನಾಗಾಲೋಟದಲ್ಲಿ ಬೆಳೆಯುತಿದ್ದು ಅರ್ಥಿಕ ಸಂಕಷ್ಟಗಳು ಎದುರಾಗುವ ಭೀತಿಯಿದೆ ಎಂದು ಕಾವೇರಿ ಕಾಲೇಜು ಭಾಗಮಂಡಲ ಉಪನ್ಯಾಸಕ ದಿವಾಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಲಯನ್ಸ್ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಜನಸಂಖ್ಯೆ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಕೆ.ಟಿ. ಬೋಪಯ್ಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಜನಸಂಖ್ಯೆ ಸ್ಫೋಟಕ್ಕೆ ಜಾಗತಿಕ ತಾಪಮಾನವು ಕೂಡ ಒಂದು ಕಾರಣವಾಗಿದೆ. ಕೊಡಗಿನಲ್ಲಿ ಹಿಂದೆದೂ ಕಂಡು ಕೇಳರಿಯದ ಜಲಪ್ರಳಯ ಸಂಭವಿಸಿ ಆಸ್ತಿ ಹಾನಿ ಪ್ರಾಣ ಹಾನಿ ಸಂಭವಿಸಿತು ಎಂದು ಹೇಳಿದರು. ಸಮಾರಂಭವನ್ನು ಉದ್ದೇಶಿಸಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ವಲ್ ಕ್ಷೇವಿಯರ್ ಮಾತನಾಡಿದರು. ವೇದಿಕೆಯಲ್ಲಿ ಸದಸ್ಯರಾದ ಮಂಡೇಪಂಡ ಸುರೇಶ್, ಅಮ್ಮಣಿಚಂಡ ಪ್ರವೀಣ್, ಪ್ರಸನ್ನ ಮತ್ತು ಕಾಲೇಜಿನ ಪ್ರಾಧ್ಯಾಪಕ ಪೊನ್ನಪ್ಪ ಉಪಸ್ಥಿತರಿದ್ದರು.