ಒಡೆಯನಪುರ, ಜು. 24: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಮೀಪದ ತ್ಯಾಗರಾಜ ಕಾಲೋನಿಯ 75 ವರ್ಷದ ವಿಶೇಷಚೇತನ ವ್ಯಕ್ತಿ ಶÀಕುನಶೆಟ್ಟಿ ಇವರಿಗೆ ವೀಲ್‍ಚೇರ್ ವಿತರಿಸಲಾಯಿತು.

ಶನಿವಾರಸಂತೆ ರೋಟರಿ ಕ್ಲಬ್ ಮಾಜಿ ಕಾರ್ಯದರ್ಶಿ ಎ.ಡಿ. ಮೋಹನ್‍ಕುಮಾರ್ ವೀಲ್‍ಚೇರ್ ವಿತರಿಸಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಜಾರಿಗೆ ಬಂದನಂತರ ರಾಜ್ಯಾದಂತ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಸರಕಾರಗಳು ಮಾಡಬೇಕಾಗಿದ್ದ ಕಾರ್ಯಕ್ರಮಗಳು ಸಂಸ್ಥೆ ಮೂಲಕ ನಡೆಯುತ್ತಿದೆ ಎಂದರು.

ಯೋಜನೆ ಮೂಲಕ ವಿಶೇಷಚೇತನರಿಗೆ ವೀಲ್‍ಚೇರ್, ವಾಟರ್ ಬೆಡ್ ಮುಂತಾದ ಅಗತ್ಯ ಸಲಕರಣೆಗಳನ್ನು ವಿತರಣೆ ಮಾಡುತ್ತಿರುವ ಜೊತೆಯಲ್ಲಿ ವಿಶೇಷಚೇತನರಿಗೆ ಮಾಸಿಕ ಪಿಂಚಣಿ ನೀಡಿ ಅವರಿಗೆ ಆತ್ಮಬಲ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಕೊಡ್ಲಿಪೇಟೆ ವಲಯ ಮೇಲ್ವೀಚಾರಕ ಕೆ. ರಮೇಶ್ ಮಾಹಿತಿ ನೀಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಮನೆ ಬಾಗಿಲಿಗೆ ಹೋಗಿ ಅಗತ್ಯ ಇರುವ ಸೌಲಭ್ಯಗಳನ್ನು ತಲಪಿಸಲಾಗುತ್ತಿದೆ ಮತ್ತು ಯೋಜನೆಯ ಉದ್ದೇಶವೂ ಸಹ ಸಮಾಜ ಸೇವೆಯದ್ದಾಗಿದೆ ಎಂದರು. ಈ ಸಂದರ್ಭ ಸೇವಾ ಪ್ರತಿನಿಧಿ ಎಸ್.ಆರ್. ಶೋಭಾವತಿ ಹಾಜರಿದ್ದರು. - ವಿ.ಸಿ. ಸುರೇಶ್, ಒಡೆಯನಪುರ