ಮಡಿಕೇರಿ, ಜು. 24: ಪ್ರಸಕ್ತ ಸಾಲಿನ ಮಳೆಗಾಲದ ಸಂದರ್ಭ ಮುಂದಿನ ದಿನಗಳಲ್ಲಿ ಭಾರೀ ಮಳೆ-ಗಾಳಿಯಿಂದ ಎದುರಾಗಬಹುದಾದ ಹಾನಿ ಮತ್ತು ಸಮಸ್ಯೆಯನ್ನು ಎದುರಿಸಲು ಸುರಕ್ಷತಾ ಕ್ರಮವಾಗಿ ಎಲ್ಲ ರೀತಿಯ ಸಲಕರಣೆಯೊಂದಿಗೆ ನಗರಸಭೆ ಸಕಲ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ನಗರಸಭಾ ಆಯುಕ್ತ ಎಂ.ಎಲ್. ರಮೇಶ್ ತಿಳಿಸಿದ್ದಾರೆ.
‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಮಳೆಗಾಲವನ್ನು ಸಮರ್ಥವಾಗಿ ಎದುರಿಸಲು ಈಗಾಗಲೇ ನಗರಸಭೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿ ಕೊಂಡಿದೆ. ನಗರಸಭಾ 42 ಮಂದಿ ಪೌರ ಕಾರ್ಮಿಕರಲ್ಲದೆ, ಹೊರಗುತ್ತಿಗೆ ಆಧಾರದಲ್ಲಿ ಸುಮಾರು 20 ಮಂದಿಯನ್ನು ನಿಯೋಜಿಸಲಾಗಿದೆ ಎಂದರು. ರಕ್ಷಣಾ ಕಾರ್ಯಕ್ಕೆ ನಗರಸಭಾ ಸಿಬ್ಬಂದಿಗಳಲ್ಲದೆ, ಪೌರ ಕಾರ್ಮಿಕರು ಸಹಿತವಾಗಿ ಟ್ರ್ಯಾಕ್ಟರ್, ಜೆಸಿಬಿಗಳನ್ನಲ್ಲದೆ ರೈನ್ ಕೋಟ್ ಗಳನ್ನು, ಗುದ್ದಲಿ, ಕತ್ತಿ, ಛತ್ರಿ, ಗರಗಸ, ಟಾರ್ಪಲ್, ಹಗ್ಗ ಸೇರಿದಂತೆ ಮತ್ತಿತರ ಸಲಕರಣೆಗಳನ್ನು ಸಂಗ್ರಹಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಮಳೆಗಾಲಕ್ಕೆ ಮುಂಚಿತವಾಗಿ ನಗರದ ಎಲ್ಲಾ ತೋಡುಗಳನ್ನು ಸ್ವಚ್ಛ ಮಾಡುವ ಮೂಲಕ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ. ನಗರಸಭೆಯೊಳಗೆ ಹೆಲ್ಪ್‍ಲೈನ್ ವಿಭಾಗವನ್ನು ತೆರೆಯಲಾಗಿದೆ.
ನಗರಸಭೆ ವ್ಯಾಪ್ತಿಯೊಳಗೆ ರಾತ್ರಿ ಅಥವಾ ಹಗಲು ಏನಾದರೂ ಮಳೆ-ಗಾಳಿಯಿಂದ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ನಗರದ ನಾಗರಿಕರು ಮಾಹಿತಿ ನೀಡಲು 08272-220111ನ್ನು ಸಂಪರ್ಕಿಸ ಬಹುದು ಎಂದು ಆಯುಕ್ತರು ತಿಳಿಸಿದ್ದಾರೆ.
ನಗರದ ಎಲ್ಲ ರಸ್ತೆಗಳ ಮತ್ತು ಗಲ್ಲಿಗಳ ಎರಡೂ ಬದಿಗಳ ಕಾಡುಗಳನ್ನು ಕಡಿದು ಸ್ವಚ್ಛಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಬೀದಿ ದೀಪ ಅಳವಡಿಸಲು ಕ್ರಮ ವಹಿಸಲಾಗಿದೆ ಎಂಬದಾಗಿ ಹೇಳಿ ದರು. ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ ಮಣ್ಣು ಕುಸಿದು ರಸ್ತೆಗೆ ಬಿದ್ದ ಮಣ್ಣು ಸೇರಿದಂತೆ ನಗರದ ಕೆಲವೆಡೆಗಳಲ್ಲಿ ರಕ್ಷಣಾ ಗೋಡೆ, ಚರಂಡಿ ಕುಸಿದು ಬಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯವನ್ನು ತುರ್ತಾಗಿ ಮಾಡ ಲಾಗುತ್ತಿದೆ ಎಂದು ನಗರಸಭಾ ಸ್ವಚ್ಛತಾ ವಿಭಾಗದ ಸೂಪರ್ ವೈಸರ್ ಓಬಳೇಶ್ವರ್ (ಓಭ್ಳಿ) ತಿಳಿಸಿದ್ದಾರೆ.
ಈ ಮಣ್ಣು ತೆರವು ಕಾರ್ಯ ವನ್ನು ನಾವು ಸ್ವಚ್ಛತಾ ಕೆಲಸದ ಪೌರ ಕಾರ್ಮಿಕರಲ್ಲದೆ, ಹೊರಗುತ್ತಿಗೆ ಮೂಲಕ ನೇಮಕಾತಿ ಮಾಡಲಾದ ಕಾರ್ಮಿಕರನ್ನು ಸೇರಿಸಿ ಬಿರುಸಿನಿಂದ ತೆರವು ಕಾರ್ಯ ಮತ್ತು ಸ್ವಚ್ಛತಾ ಕಾರ್ಯವನ್ನು ಕೂಡ ಮಾಡಲಾಗು ತ್ತಿದೆ ಎಂದರು. ಮಳೆಗಾಲಕ್ಕೆ ಮುನ್ನವೇ ನಗರದ ರಾಜಕಾಲುವೆಗಳ ಹೂಳೆತ್ತಿ ಸ್ವಚ್ಛ ಗೊಳಿಸಲಾಗಿದೆ. ಎಲ್ಲಾ ಕಾಲುವೆ ಗಳ ಮತ್ತು ತೋಡುಗಳ ಎರಡೂ ಬದಿಗಳ ಕಾಡುಗಳನ್ನು ಕಡಿದು ಸ್ವಚ್ಛ ಗೊಳಿಸಲಾಗಿದೆ ಎಂದು ಓಬ್ಳಿ ತಿಳಿಸಿದ್ದಾರೆ.