ಒಡೆಯನಪುರ, ಜು. 25: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯ ಸಮೀಪದ ಹೊಸಗುತ್ತಿ ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಮಂಜೂರಾದ 5 ಸಾವಿರ ರೂ. ಡಿ.ಡಿ.ಯನ್ನು ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ವಿತರಿಸಿದರು.
ನಂತರ ಮಾತನಾಡಿದ ವೈ.ಪ್ರಕಾಶ್ ಅವರು ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆ ವತಿಯಿಂದ ಕ್ಷೇತ್ರ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿರುವ ಹಣವನ್ನು ದೇವಸ್ಥಾನದ ಪ್ರಗತಿಕಾರ್ಯಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಹಲವಾರು ಕಾರ್ಯಕ್ರಮಗಳು ಚಾಲ್ತಿಯಲ್ಲಿದ್ದು ಇದನ್ನು ಸಂಘದ ಸದಸ್ಯರುಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಹೆಬ್ಬಾಲೆ ವಲಯದ ಮೇಲ್ವೀಚಾರಕ ಕೆ. ವಿನೋದ್ಕುಮಾರ್ ಮಾತನಾಡಿ, ಹೆಬ್ಬಾಲೆ ವಲಯದಲ್ಲಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ 3 ದೇವಸ್ಥಾನ ಗಳಿಗೆ ಅನುದಾನವನ್ನು ನೀಡಲಾಗಿದೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದೇವಸ್ಥಾನ ಗಳ ಅಭಿವೃದ್ಧಿ, ಪರಿಸರ ಅಭಿವೃದ್ಧಿ, ವಿಶೇಷಚೇತನರಿಗೆ ಅಗತ್ಯ ಪರಿಕರಗಳ ವಿತರಣೆ ಸೇರಿದಂತೆ ಹಲವಾರು ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ ಎಂದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಜಿತೇಂದ್ರ, ಗ್ರಾಮದ ಪ್ರಮುಖರಾದ ನಸೀಮಾ ಮಸೀದ್, ಸತೀಶ್, ಸತ್ಯಪ್ರಕಾಶ್, ಚಂದ್ರಪ್ಪ, ಶಿವಪ್ಪ, ಈರಪ್ಪ, ಮುತ್ತಪ್ಪ, ಉದಯ್ ಕುಮಾರ್, ಸೇವಾಪ್ರತಿನಿಧಿ ಮೀನಾಕ್ಷಿ ಮುಂತಾದವರು ಹಾಜರಿದ್ದರು.