ಮಡಿಕೇರಿ, ಜು. 24: ಕಳೆದ ಬಾರಿ ಪ್ರಾಕೃತಿಕ ವಿಕೋಪ ಸಂಬಂಧ ಜಿಲ್ಲೆಗೆ ಬಿಡುಗಡೆಯಾದ ಪರಿಹಾರ ನಿಧಿ ಹಣವನ್ನು ಅಧಿಕಾರಿಗಳು ಯಾರ ಗಮನಕ್ಕೂ ತಾರದಖಾಸಗಿ ಬ್ಯಾಂಕ್‍ನಲ್ಲಿರಿಸಿದ್ದು, ಇದರಲ್ಲಿ ದುರುಪಯೋಗವಾಗಿದೆ; ಈ ಬಗ್ಗೆ ತನಿಖೆಯಾಗಬೇಕೆಂಬ ಸದಸ್ಯರುಗಳ ಒತ್ತಾಯದ ಮೇರೆಗೆ ಸದನ ಸಮಿತಿ ರಚಿಸಿ ತನಿಖೆ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯ ಶಿವುಮಾದಪ್ಪ ವಿಷಯ ಪ್ರಸ್ತಾಪಿಸಿ; ಪರಿಹಾರ ನಿಧಿಯಡಿ ರೂ. 33 ಕೋಟಿ ಹಣ ಜಿಲ್ಲಾಧಿಕಾರಿಗಳ ಖಾತೆಗೆ ಬಂದಿದೆ. ಈ ಪೈಕಿ 28 ಕೋಟಿ ಹಣವನ್ನು ಖಾಸಗಿ ಕೋಟಕ್ ಮಹೀಂದ್ರ ಬ್ಯಾಂಕ್ ಖಾತೆಯಲ್ಲಿ ಇರಿಸಲಾಗಿದೆ. ಖಾಸಗಿ ಬ್ಯಾಂಕ್‍ನಲ್ಲಿ ಸರಕಾರಿ ಹಣ ಠೇವಣಿ ಇಡಬೇಕಾದರೆ, ಹಣಕಾಸು ಇಲಾಖೆಯಿಂದ ಅನುಮತಿ ಪಡೆಯಬೇಕಾಗುತ್ತದೆ.

ಇವರ ಉದ್ದೇಶ ಏನು? ಈ ನಿಧಿಯಡಿ ಯಾರಿಂದ ಯಾವ ರೀತಿ ಕೆಲಸಗಳಾಗಿವೆ ಎಂದು ಮಾಹಿತಿ ಬಯಸಿದರು. ಇದಕ್ಕೆ ದನಿಗೂಡಿಸಿದ ಸದಸ್ಯ ಪ್ರಥ್ಯು, ಪರಿಹಾರ ನಿಧಿ ವಿಚಾರದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಬಯಸಿದರು. ಇದಕ್ಕೆ ದನಿಗೂಡಿಸಿದ ಸದಸ್ಯ ಪ್ರಥ್ಯು, ಪರಿಹಾರ ನಿಧಿ ವಿಚಾರದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ (ಮೊದಲ ಪುಟದಿಂದ) ಖಾತೆಗೆ ಬಂದಿದೆ. ಕೆಲಸ ಕಾರ್ಯಗಳು ಶೀಘ್ರ ಪೂರ್ಣಗೊಳ್ಳಲಿ ಎಂಬ ಉದ್ದೇಶದೊಂದಿಗೆ ನೇರವಾಗಿ ಪಂಚಾಯತ್‍ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಿದ್ದಾರೆ. ಜಿ.ಪಂ. ಗಮನಕ್ಕೆ ಬಂದಿಲ್ಲ. ಇತ್ತೀಚೆಗೆ ಈ ಬಗ್ಗೆ ದೂರು ಬಂದಿದ್ದು; ಈ ನಿಟ್ಟಿನಲ್ಲಿ ಲೆಕ್ಕತಪಾಸಣೆ ವಿಭಾಗದ ಮೂಲಕ ತನಿಖೆಗೆ ಕ್ರಮ ಕೈಗೊಂಡಿರುವದಾಗಿ ತಿಳಿಸಿದರು.

ಸದಸ್ಯ ಪ್ರಥ್ಯು ಮಾತನಾಡಿ, ಇದೊಂದು ದೊಡ್ಡ ದಂಧೆ ಆಗಿದೆ. ಇದು ಪರಿಹಾರ ಹಣ, ಓರ್ವ ವ್ಯಕ್ತಿಯಿಂದ ದುರುಪಯೋಗ ವಾಗುತ್ತಿದೆ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಅಧಿಕಾರಿ ಕೋಟಿಗಟ್ಟಲೆ ಹಣ ದುರುಪಯೋಗಪಡಿಸುವದೆಂದರೆ ಹೇಗೆ? ಎಂದು ಪ್ರಶ್ನಿಸಿದರು. ಈ ಬಗ್ಗೆ ಸಿಓಡಿ ತನಿಖೆಗೆ ಒಳಪಡಿಸಬೇಕು, ಪೊಲೀಸ್ ಉನ್ನತಾಧಿಕಾರಿಗಳಿಗೆ ದೂರು ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಕಂಠಯ್ಯ ಅವರು; ಜಿಲ್ಲಾಧಿಕಾರಿಗಳ ಸೂಚನೆ ಪ್ರಕಾರ ಪ್ರತ್ಯೇಕ ಖಾತೆಯಲ್ಲಿರಿಸಲಾಗಿದೆ. ಬಡ್ಡಿ ಹಣ ಡ್ರಾ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಖಾಸಗಿ ಬ್ಯಾಂಕ್‍ನಲ್ಲಿರಿಸಲು ಅನುಮತಿ ಪಡೆದುಕೊಂಡಿದ್ದೀರಾ ಎಂಬ ಸದಸ್ಯರ ಪ್ರಶ್ನೆಗೆ ಜಿಲ್ಲಾಧಿಕಾರಿಗಳಿಗೆ ಎರಡು ಪತ್ರ ಬರೆಯಲಾಗಿದೆ, ಯಾವದೇ ಉತ್ತರ ಬಂದಿಲ್ಲ ಎಂದಷ್ಟೇ ಉತ್ತರಿಸಿದರು. ಇದೇ ಸಂದರ್ಭ ಮಾತನಾಡಿದ ಸದಸ್ಯ ಶಶಿ ಸುಬ್ರಮಣಿ ಅವರು; ಪರಿಹಾರ ಸಂಬಂಧ ನಿನ್ನೆ ಸದನದಲ್ಲಿ ಮುಖ್ಯಮಂತ್ರಿಗಳು ರೂ. 1 ಲಕ್ಷ ನೀಡಿರುವದಾಗಿ ಹೇಳಿದ್ದಾರೆ. ಆದರೆ ನೈಜವಾಗಿ ರೂ. 50 ಸಾವಿರ ಕೂಡ ಸಿಕ್ಕಿಲ್ಲ. ಇದರ ಬಗ್ಗೆ ಅಧಿಕಾರಿಗಳು ಲೆಕ್ಕ ಕೊಡುತ್ತಿಲ್ಲ. ಈ ಬಗ್ಗೆ ಕೂಡ ತನಿಖೆಯಾಗಬೇಕೆಂದು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಅಧ್ಯಕ್ಷ ಬಿ.ಎ ಹರೀಶ್ ಅವರು, ಈ ಬಗ್ಗೆ ತನಿಖೆ ಮಾಡಿ ವರದಿ ತರಿಸಿಕೊಳ್ಳೋಣ ಎಂದು ಹೇಳಿದರು.

ಸದಸ್ಯ ಮುರಳಿ ಕರುಂಬಮಯ್ಯ ಮಾತನಾಡಿ, ಸರಕಾರದಿಂದ ಅನುದಾನ ಬಂದಾಗ ಜಿಲ್ಲಾ ಹಣಕಾಸು ಸಮಿತಿಯಲ್ಲಿ ಚರ್ಚೆ ಆಗಬೇಕಿದೆ. ಆದರೆ ಈ ಬಗ್ಗೆ ಸಮಿತಿ ಗಮನಕ್ಕೆ ಬಂದಿಲ್ಲವೆಂದಾದರೆ ಸಮಿತಿ ಕಾರ್ಯದರ್ಶಿಗಳ ಬೇಜವಾಬ್ದಾರಿಕೆಯಾಗಿದೆ. ಹಣಕಾಸು ಸಮಿತಿಯದ್ದೇ ತಪ್ಪು ಎಂದು ಪ್ರತಿಪಾದಿಸಿದರು.

ಸದಸ್ಯ ಶಿವು ಮಾತನಾಡಿ; ನಾವೇ ಸಮಿತಿ ಮಾಡಿ ತನಿಖೆ ಮಾಡಿ ಅದು ಸೋರಿಕೆಯಾಗಿ ನಮ್ಮ ತಲೆಗೆ ಹಾಕಿಕೊಳ್ಳೋದು ಬೇಡ; 33 ಕೋಟಿ ಹಣದ ವಿಚಾರ ಇದಾಗಿದೆ ಎಂದರು. ಸದಸ್ಯ ಪ್ರಥ್ಯು ಮಾತನಾಡಿ, ಇಲ್ಲಿ ರೂ. 1 ಲಕ್ಷದ ದುರುಪಯೋಗದ್ದೇ ತನಿಖೆ ಆಗುತ್ತಿಲ್ಲ. ಇನ್ನೂ ಕೋಟಿ ಲೆಕ್ಕದ್ದು ಆಗುವ ಕೆಲಸವಲ್ಲ. ಸಿಓಡಿ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸಿದರು.

ಎಲ್ಲವನ್ನು ಕೂಲಂಕಷವಾಗಿ ಆಲಿಸಿದ ಅಧ್ಯಕ್ಷ ಹರೀಶ್ ಅವರು, ನಮ್ಮಲ್ಲೇ ಆಡಳಿತ ಪಕ್ಷ, ವಿಪಕ್ಷ ಸದಸ್ಯರುಗಳನ್ನೊಳಗೊಂಡು; ಹಿರಿಯ ನಿವೃತ್ತ ಅಧಿಕಾರಿಗಳನ್ನು ಸೇರಿಸಿ ಸಮಿತಿ ಮಾಡಿ ತನಿಖೆ ಕೈಗೊಂಡು, ಪ್ರಥಮ ವರದಿ ನಾವೇ ಮಾಡೋಣ ನಂತರದಲ್ಲಿ ಅವಶ್ಯವೆನಿಸಿದಲ್ಲಿ ಸಿಓಡಿ ತನಿಖೆಗೆ ಒಳಪಡಿಸುವ ಬಗ್ಗೆ ತೀರ್ಮಾನ ಮಾಡೋಣವೆಂದರು. ಸಭೆ ಒಪ್ಪಿಗೆ ಸೂಚಿಸಿತು.

ಇದೇ ಸಂದರ್ಭದಲ್ಲಿ ಸದಸ್ಯೆ ಯಾಲದಾಳು ಪದ್ಮಾವತಿ ಅವರು, ಮಕ್ಕಂದೂರು ಕ್ಷೇತ್ರದಲ್ಲಿ ಸಂತ್ರಸ್ತರಿಗೆ ಸರಿಯಾದ ರೀತಿಯಲ್ಲಿ ಪರಿಹಾರ ಸಿಗಲಿಲ್ಲ ಎಂದು ಹೇಳಿದರೆ, ಸದಸ್ಯೆ ಮಂಜುಳಾ ತನ್ನ ಕ್ಷೇತ್ರದಲ್ಲಿ ಇದುವರೆಗೆ ಪರಿಹಾರ ಸಿಕ್ಕಿಲ್ಲವೆಂದು ಗಮನಕ್ಕೆ ತಂದರು. ಸದಸ್ಯ ಮಹೇಶ್ ಗಣಪತಿ ಇದೊಂದು ಗಂಭೀರ ವಿಚಾರವಾಗಿದ್ದು; ದಂಧೆ ಆಗುತ್ತಿದೆ ಎಂದರು. ಶಶಿ ಸುಬ್ರಮಣಿ ಮಾತನಾಡಿ, ಈ ಎಲ್ಲವನ್ನೂ ಸೇರಿಸಿ ತನಿಖೆ ನಡೆಸುವಂತೆ ಕೋರಿದರು. ಈ ಬಗ್ಗೆಯೂ ತನಿಖೆ ಕೈಗೊಳ್ಳುವಂತೆ ನಿರ್ಣಯಿಸಲಾಯಿತು.

ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸ್ಥಾಯಿ ಸಮಿತಿ ಸದಸ್ಯರುಗಳಾದ ಸಿ.ಕೆ. ಬೋಪಣ್ಣ, ನೆಲ್ಲಚಂಡ ಕಿರಣ್, ಸರೋಜಮ್ಮ, ಸದಸ್ಯರುಗಳು ಪಾಲ್ಗೊಂಡಿದ್ದರು.