ಚೆಟ್ಟಳ್ಳಿ, ಜು. 24: ಯೂತ್ ಫ್ರೆಂಡ್ಸ್ ಕುಂಜಿಲ ಇವರ ವತಿಯಿಂದ ಕುಂಜಿಲದಲ್ಲಿ ನಡೆದ ರಾಜ್ಯಮಟ್ಟದ ಕೆಸರು ಗದ್ದೆ ಕಾಲ್ಚೆಂಡು ಪಂದ್ಯಾಟದಲ್ಲಿ ಸಿಟಿ ಬ್ರದರ್ಸ್ ಕಡಂಗ ಹಾಗೂ ಸೆವೆನ್ ಸ್ಟಾರ್ ಕಡಂಗ ನಡುವಿನ ರೋಚಕ ಫೈನಲ್ ಹಣಾಹಣಿಯಲ್ಲಿ 3-2 ಗೋಲುಗಳ ಅಂತರದಿಂದ ಸಿಟಿ ಬ್ರದರ್ಸ್ ಕಡಂಗ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಸೆವೆನ್ ಸ್ಟಾರ್ ಕಡಂಗ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಇದಕ್ಕೂ ಮೊದಲು ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ಲಕ್ಕಿ ಬಾಯ್ಸ್ ಕುಂಜಿಲ ಹಾಗೂ ಸೆವೆನ್ ಸ್ಟಾರ್ ಕಡಂಗ ನಡುವೆ ನಡೆಯಿತು. ಪೆನಾಲ್ಟಿ ಶೂಟೌಟ್ ನಲ್ಲಿ 3-1 ಗೋಲುಗಳ ಅಂತರದಿಂದ ಸೆವೆನ್ ಸ್ಟಾರ್ ಕಡಂಗ ತಂಡವು ಗೆಲವು ಸಾಧಿಸಿ ಫೈನಲ್‍ಗೆ ಪ್ರವೇಶಿಸಿತು.

ಎರಡನೇ ಸೆಮಿಫೈನಲ್ ಪಂದ್ಯವು ಬೇತ್ರಿ ಬಾಯ್ಸ್ ಹಾಗೂ ಸಿಟಿ ಬ್ರದರ್ಸ್ ಕಡಂಗ ನಡುವೆ ನಡೆಯಿತು. ಸಿಟಿ ಬದ್ರರ್ಸ್ ಕಡಂಗ ತಂಡವು ಪೆನಾಲ್ಟಿ ಶೂಟೌಟ್‍ನಲ್ಲಿ 2-0 ಗೋಲುಗಳ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿತು.

ಪಂದ್ಯಾಟದ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಸೆವೆನ್ ಸ್ಟಾರ್ ಕಡಂಗ ತಂಡದ ನಿಸಾಮ್ ಹಾಗೂ ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಸಿಟಿ ಬ್ರದರ್ಸ್ ಕಡಂಗ ತಂಡದ ಆಶಿಕ್ ಪಡೆದುಕೊಂಡರು.

- ಕೆ.ಎಂ. ಇಸ್ಮಾಯಿಲ್ ಕಂಡಕರೆ