ಮಡಿಕೇರಿ, ಜು. 25: ಮಡಿಕೇರಿಯ ಇನ್ನರ್ ವೀಲ್ ಕ್ಲಬ್ ವತಿಯಿಂದ ವನಮಹೋತ್ಸವ ಆಯೋಜಿಸಲಾಯಿತು. ಮಡಿಕೇರಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಇನ್ನರ್ ವೀಲ್ ವತಿಯಿಂದ ಹಲವಾರು ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. ಇನ್ನರ್ ವೀಲ್ ಅಧ್ಯಕ್ಷೆ ನಿಶಾ ಮೋಹನ್ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯದರ್ಶಿ ಶಫಾಲಿ ರೈ, ಖಜಾಂಚಿ ನಮಿತಾ ರೈ. ಸದಸ್ಯರಾದ ಶಮ್ಮಿ ಪ್ರಭು, ಪ್ರಿಯಾ ಜಗದೀಶ್, ಲತಾ ಚಂಗಪ್ಪ, ಲತಾ ಸುಬ್ಬಯ್ಯ,ಕನ್ನು ದೇವರಾಜ್, ಆಗ್ನೇಸ್ ಮುತ್ತಣ್ಣ, ಬೊಳ್ಳು ಮೇದಪ್ಪ, ಜ್ಯುಬಿ ಗಣಪತಿ ಪಾಲ್ಗೊಂಡಿದ್ದರು.