ಶನಿವಾರಸಂತೆ, ಜು. 23: ಪಟ್ಟಣದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಮಾರ್ಗದರ್ಶನದಲ್ಲಿ ಸೋಲಾರ್ ಆಧಾರಿತ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸೆಲ್ಕೊ ಸೋಲಾರ್ ಪ್ರತಿನಿಧಿ ಶಶಿಕುಮಾರ್ ಮಾತನಾಡಿ, ಸೆಲ್ಕೊ ಸೋಲಾರ್ ಉಪಕರಣಗಳಾದ ಜೆರಾಕ್ಸ್ ಯಂತ್ರ, ಸೋಲಾರ್ ಲೈಟ್, ವಾಟರ್ ಹೀಟರ್, ಕುಲುಮೆ, ಹಾಲು ಕರೆಯುವ ಯಂತ್ರ, ಸೋಲಾರ್ ಬೇಲಿ, ಸೋಲಾರ್ ಟೈಲರಿಂಗ್ ಹೀಗೆ ಸೋಲಾರ್ ಮೂಲಕ ಮಾಡಬಹುದಾದ ಸ್ವ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ಪ್ರಾತ್ಯಕ್ರಿಕೆ ಮೂಲಕ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಯೋಜನೆಯ ಒಕ್ಕೂಟದ ಅಧ್ಯಕ್ಷೆ ಶಾಲಿನಿ ಒಕ್ಕೂಟದ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ತಾಲೂಕು ಕೃಷಿ ಮೇಲ್ವಿಚಾರಕಿ ಗೀತಾ ಪ್ರಾಸ್ತಾವಿಕ ನುಡಿಯಾಡಿದರು. ಸೆಲ್ಕೊ ಸೋಲಾರ್ ಪ್ರತಿನಿಧಿ ಶಿವಾನಂದ್, ಸೇವಾ ಪ್ರತಿನಿಧಿಗಳಾದ ಯಶೋದಾ, ಶೋಭಾವತಿ ಉಪಸ್ಥಿತರಿದ್ದರು. ಸ್ವ ಉದ್ಯೋಗನಿರತ 42 ಮಂದಿ ಸದಸ್ಯರು ತರಬೇತಿಯ ಪ್ರಯೋಜನ ಪಡೆದುಕೊಂಡರು. ವಿವಿಧ ಉಪಕರಣಗಳ ಬಗ್ಗೆ ಬೇಡಿಕೆ ವ್ಯಕ್ತಪಡಿಸಿದರು.