ಕುಶಾಲನಗರ, ಜು. 24: ಕುಶಾಲನಗ ರದ ಸಮೀಪ ಬೈಲು ಕೊಪ್ಪ ಟಿಬೇಟಿಯನ್ ಕ್ಯಾಂಪ್‍ನಲ್ಲಿ ಮಹಿಳೆಯೋರ್ವರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಂಭೀರ ವಾಗಿ ಗಾಯ ಗೊಳಿಸಿದ ಘಟನೆ ನಡೆದಿದೆ. ಹೊಸಕೋಟೆ ಬಳಿಯ ಕಲ್ಲೂರು ಗ್ರಾಮದ ವೃದ್ದೆ ದೇವಕಿ (60) ಎಂಬವರು ತೀವ್ರ ಗಾಯಗೊಂಡು ಕುಶಾಲನಗರ ಆಸ್ಪತ್ರೆ ಯಲ್ಲಿ ಚಿಕಿತ್ಸೆಗೆ ಒಳಗಾಗಿ ದ್ದಾರೆ. ಬುಧವಾರ ಬೆಳಗ್ಗೆ ಟಿಬೇಟಿಯನ್ ಕ್ಯಾಂಪ್‍ನಲ್ಲಿ ರುವ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ ಸಂದರ್ಭ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ 5 ಕ್ಕೂ ಅಧಿಕ ಬೀದಿ ನಾಯಿಗಳು ಏಕಾಏಕಿ ಅವರ ಮೇಲೆ ಎರಗಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿ ರುವದು ಗೋಚರಿಸಿದೆ. ಸ್ಥಳೀಯರು ಬಂದು ನಾಯಿಗಳನ್ನು ಓಡಿಸಿ ಗಾಯಗೊಂಡ ವೃದ್ಧ ಮಹಿಳೆ ಯನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ದಾಖಲಿಸಲಾಗಿದೆ.