ಬೆಂಗಳೂರಿನಲ್ಲಿರುವ ಭಾರತ ಸಂಸ್ಕøತಿ ಪ್ರತಿಷ್ಠಾನವು ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ರಾಮಾಯಣ-ಮಹಾಭಾರತದ ಕುರಿತು ನವೆಂಬರ್ ತಿಂಗಳಿನಲ್ಲಿ ಪರೀಕ್ಷೆಯನ್ನು ಏರ್ಪಡಿಸಲಿದ್ದು, ಈ ಎರಡೂ ಪರೀಕ್ಷೆಗಳು ಕನ್ನಡ, ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ನಡೆಯಲಿದ್ದು, ವಿದ್ಯಾರ್ಥಿಗಳು ತಮ್ಮ ಆಯ್ಕೆ ಭಾಷೆಯಲ್ಲಿ ರಾಮಾಯಣ ಅಥವಾ ಮಹಾಭಾರತ ಯಾವದಾದರೊಂದನ್ನು ಆಯ್ದುಕೊಳ್ಳಬಹುದಾಗಿದೆ. ಒಂದು ಶಾಲೆ ಹಾಗೂ ಕಾಲೇಜಿನಿಂದ ಕನಿಷ್ಟ 25 ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅವಕಾಶವಿದೆ. ಪರೀಕ್ಷೆಯು ನವೆಂಬರ್ 16 ರಂದು ಆಯಾ ಶಾಲೆ-ಕಾಲೇಜುಗಳಲ್ಲಿ ನಡೆಯಲಿದ್ದು, ಪರೀಕ್ಷೆಯಲ್ಲಿ ಕನಿಷ್ಟ 35 ಅಂಕಗಳನ್ನು ಪಡೆದವರನ್ನು ತೇರ್ಗಡೆಗೊಳಿಸಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ಬೆಂಗಳೂರಿನ ಶಂಕರ ಮಠ ಸಮಾನಾಂತರ ರಸ್ತೆಯಲ್ಲಿರುವ ಭಾರತ ಸಂಸ್ಕøತಿ ಪ್ರತಿಷ್ಠಾನದ ಕಚೇರಿಯಿಂದ ಇಲ್ಲವೆ ಸ್ಥಳೀಯವಾಗಿ ಕರವಂಡ ಕುಶಾಲಪ್ಪ (ಮೊಬೈಲ್-9448530363) ವೇದಾಂತ ಸಂಘ ಮಡಿಕೇರಿ ಇವರಿಂದ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಂಡು ಆಗಸ್ಟ್ 31ರ ಒಳಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.