*ಸಿದ್ದಾಪುರ, ಜು. 25: ರಾಜ್ಯ ಮತ್ತು ಕೇಂದ್ರ ಸರ್ಕಾರ ಗ್ರಾಮಾಂತರ ಪ್ರದೇಶದ ಶೈಕ್ಷಣಿಕ ಅಭಿವೃದ್ಧಿಗೆ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿ ಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮರಳಿ ಬಾ ಶಾಲೆಗೆ, ಅಕ್ಷರ ದಾಸೋಹ, ಚಿಣ್ಣರ ಅಂಗಳ ಮುಂತಾದ ಯೋಜನೆಗಳನ್ನು ಕಾರ್ಯರೂಪಕ್ಕ ತರುತ್ತಿದೆ. ಆದರೂ ರಾಜ್ಯದಲ್ಲಿ ಅನೇಕ ಪ್ರಾಥಮಿಕ ಶಾಲೆಗಳು ಮುಚ್ಚಲ್ಪಡುತ್ತಿವೆ. ಈ ಸಾಲಿಗೆ ಇದೀಗ ಕೂಡ್ಲೂರು- ಚೆಟ್ಟಳ್ಳಿಯ ಪ್ರಾಥಮಿಕ ಶಾಲೆ ಸೇರುತ್ತಿದೆ.

1955ರಲ್ಲಿ ಪ್ರಾರಂಭವಾದ ಕೂಡ್ಲೂರು- ಚೆಟ್ಟಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ವ್ಯಾಸಂಗ ಮಾಡು ತ್ತಿಲ್ಲ. 1955ರಲ್ಲಿ ಸ್ಥಳೀಯ ಕಾಫಿ ಬೆಳೆಗಾರ ಐಚ್ಚೆಟ್ಟೀರ ಗಣಪತಿ ಅವರು ಎರಡು ಏಕರೆ ಜಾಗವನ್ನು ಶಾಲೆ ನಿರ್ಮಾಣಕ್ಕೆ ಉದಾರವಾಗಿ ನೀಡಿದ್ದರು. ಪ್ರಾರಂಭದಲ್ಲಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಪ್ರಾರಂಭ ಗೊಂಡ ಶಾಲೆ ನಂತರ 7ನೇ ತರಗತಿ ವರೆಗಿನ ಹಿರಿಯ ಪ್ರಾಥಮಿಕ ಶಾಲೆಯಾಗಿ ಮುಂದುವರೆಯುತ್ತಿದ್ದು, ಇತ್ತೀಚಿನ ವರ್ಷಗಳವರೆಗೂ ಸ್ಥಳೀಯ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಒದಗಿಸಿದ ಶಾಲೆಯಲ್ಲಿ ಬರಬರುತ್ತಾ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿತ್ತು.

ಇಲ್ಲಿನ ಶಾಲೆಗೆ ಹೆಬ್ಬಾಲೆಯಿಂದ ಶಿಕ್ಷಕ ಅಣ್ಣಯ್ಯ ಆಚಾರ್ಯ ಮತ್ತು ವಾಲ್ನೂರಿನಿಂದ ಧನಲಕ್ಷ್ಮಿ ಎಂಬ ಶಿಕ್ಷಕಿ ಕರ್ತವ್ಯಕ್ಕೆ ಬರುತ್ತಿದ್ದರು. ಪ್ರಸಕ್ತ ವರ್ಷ ಕೇವಲ ನಾಲ್ಕು ವಿದ್ಯಾರ್ಥಿ ಗಳು ಮಾತ್ರ ಪ್ರವೇಶಾತಿ ಪಡೆದ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಗಳನ್ನು ಬೇರೆಡೆ ಸೇರಿಸಲು ಸೂಚಿಸಲಾಯಿತು ಎನ್ನಲಾಗಿದೆ.

ಶಿಕ್ಷಕಿ ಧನಲಕ್ಷ್ಮಿಯವರನ್ನು ಶಿಕ್ಷಣ ಇಲಾಖೆ ಬೇರೆಡೆಗೆ ವರ್ಗಾವಣೆ ಗೊಳಿಸಿಲ್ಲ, ಆದರೂ ಸ್ವಇಚ್ಚೆಯಿಂದ ಪಕ್ಕದ ನಂಜರಾಯಪಟ್ಟಣದ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮತ್ತೋರ್ವ ಶಿಕ್ಷಿಕಿ ಪೂರ್ಣಿಮ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಕಾಡು ಕಿರಿಯ ಪ್ರಾಥಮಿಕ ಶಾಲೆಗೆ ಹೋಗಿ ಪಾಠ ಮಾಡುತ್ತಿ ದ್ದಾರೆ. ಶಿಕ್ಷಕ ಅಣ್ಣಯ್ಯ ಮಾತ್ರ ನಿತ್ಯ ಶಾಲೆಗೆ ಬಂದು ಹಾಜರಾತಿ ಹಾಕಿ ಹೋಗುತ್ತಿದ್ದಾರೆ. ಈ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರು ಮತ್ತು ಬಡತನ ರೇಖೆಗಿಂತ ಕೆಳಗಿರುವವರು ವಾಸ ಮಾಡಿಕೊಂಡಿದ್ದು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿ ಗಳು ಭವಿಷ್ಯ ರೂಪಿಸಿಕೊಳ್ಳಲಿ ಎಂಬ ಆಶಾ ಭಾವನೆ ಯಿಂದ ಪ್ರಾರಂಭಿಸಿದ ಶಿಕ್ಷಣಸಂಸ್ಥೆ ದುರಂತ ಅಂತ್ಯ ಕಾಣುವತ್ತ ಹೆಜ್ಜೆ ಹಾಕುತ್ತಿದೆ. ಪ್ರಸಕ್ತ ಕಾಡಾನೆ ಕಾಟವನ್ನು ಈ ವ್ಯಾಪ್ತಿಯ ಜನತೆ ಎದುರಿಸು ವಂತ್ತಾಗಿದೆ. ಕಾಡಾನೆ ಹಾವಳಿಯಿಂದ ಕಂಗೆಟ್ಟ ಪೋಷಕರು ತಮ್ಮ ಮಕ್ಕಳನ್ನು ಇಲ್ಲಿ ವ್ಯಾಸಂಗಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದೇ ಗ್ರಾಮದ ನಿವಾಸಿಯಾಗಿರುವ ಜಿಲ್ಲಾ ಪಂಚಾಯತ್ ಸದಸ್ಯೆ ಸುನಿತಾ ಮಂಜುನಾಥ್, ಚೆಟ್ಟಳ್ಳಿಯಲ್ಲಿ ವಾಸ ವಿರುವ ತಾಲೂಕು ಪಂಚಾಯತ್ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಸುಂದರ ಪರಿಸರದೊಳಗೆ ಮುಚ್ಚಿ ಹೋಗುತ್ತಿರುವ ವಿದ್ಯಾದೇಗುಲ ವೊಂದಕ್ಕೆ ಕಾಯಕಲ್ಪ ಒದಗಿಸಬೇಕು ಎಂಬುದು ಸ್ಥಳೀಯರ ಒತ್ತಾಸೆ ಯಾಗಿದೆ. -ಅಂಚೆಮನೆ ಸುಧಿ