ಕುಶಾಲನಗರ, ಜು. 25: ಎಸ್‍ಕೆಎಸ್‍ಎಸ್‍ಎಫ್ ಕೇಂದ್ರ ಸಮಿತಿ ವತಿಯಿಂದ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಪರಿಹಾರ ವಿತರಣೆ ಕಾರ್ಯಕ್ರಮ ಕುಶಾಲನಗರದಲ್ಲಿ ನಡೆಯಿತು. ಪಟ್ಟಣದ ದಾರುಲ್ ಉಲೂಂ ಮದರಸಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 7 ಮಂದಿ ಸಂತ್ರಸ್ತರಿಗೆ ತಲಾ ರೂ. 50 ಸಾವಿರ ಮೊತ್ತದ ಪರಿಹಾರದ ಚೆಕ್ ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಎ.ಯಾಕೂಬ್ ಮಾತನಾಡಿ, ಸಾಮಾಜಿಕ ಸೇವಾ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ಮೂಲಕ ಸಂಘಟನೆಗಳು ತಮ್ಮ ಜವಾಬ್ದಾರಿ ಪ್ರದರ್ಶಿಸಬೇಕಿದೆ. ನೊಂದವರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮುಂದಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಸ್ತ ಕೇರಳ ಜಮಾಅತ್ ಉಲುಮ ಸದಸ್ಯರಾದ ಅಬ್ದುಲ್ಲಾ ಫೈಜಿ ಮಾತನಾಡಿದರು. ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮಿಸ್ಬಾಹಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ತಮ್ಲಿಕ್ ಧಾರಿಮಿ, ಸಹ ಕಾರ್ಯದರ್ಶಿ ಶುಯೈಬಾ ಫೈಜಿ, ಪ್ರಮುಖರಾದ ಆರಿಫ್ ಫೈಜಿ, ಅಬುಬಕರ್ ಸಿದ್ದಿಕ್ ಹಾಜಿ, ಎ.ಎಂ.ಹುಸೈನ್, ಉಮ್ಮರ್ ಫೈಜಿ, ಇಕ್ಬಾಲ್ ಮುಸ್ಲಿಯಾರ್ ಕುಶಾಲನಗರ ಹಿಲಾಲ್ ಮಸೀದಿ ಖತೀಬರಾದ ಸೂಫಿ ಧಾರಿಮಿ ಮತ್ತಿತರರು ಇದ್ದರು. ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಸೋಮೇಗೌಡ ಅವರ ಮೂಲಕ ಸಂತ್ರಸ್ತರಿಗೆ ಚೆಕ್ ಹಸ್ತಾಂತರಿಸಲಾಯಿತು.