ಸೋಮವಾರಪೇಟೆ, ಜು. 24: ಸಮೀಪದ ಐಗೂರು ಗ್ರಾ.ಪಂ. ವಾಪ್ತಿಯ ವಿವಿಧ ವಾರ್ಡ್‍ಗಳ ಸಭೆ ತಾ. 29 ಮತ್ತು 30 ರಂದು ನಡೆಯಲಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ. ತಾ. 29 ರಂದು ಐಗೂರು-1ರ ವಾರ್ಡ್ ಸಭೆ ಕಾಜೂರಿನ ಹರಿಹರ ಯುವಕ ಸಂಘದ ಸಭಾಂಗಣದಲ್ಲಿ 11 ಗಂಟೆಗೆ ಸದಸ್ಯೆ ಕುಮಾರಿ ಅವರ ಅಧ್ಯಕ್ಷತೆಯಲ್ಲಿ, ಐಗೂರು-2ರ ವಾರ್ಡ್ ಸಭೆ ಹೊಸತೋಟ ಅಂಗನವಾಡಿ ಕೇಂದ್ರದಲ್ಲಿ ಅಪರಾಹ್ನ 2.30 ಗಂಟೆಗೆ ಸದಸ್ಯ ಕೆ.ಪಿ.ದಿನೇಶ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಯಡವಾರೆ ವಾರ್ಡ್ ಸಭೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಾ. 30ರಂದು ಪೂರ್ವಾಹ್ನ 11 ಗಂಟೆಗೆ ಸದಸ್ಯ ಕೆ.ಪಿ. ರಾಯ್ ಅಧ್ಯಕ್ಷತೆಯಲ್ಲಿ, ಯಡವನಾಡು ವಾರ್ಡ್ ಸಭೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಪರಾಹ್ನ 2.30ಕ್ಕೆ ಗ್ರಾ.ಪಂ. ಅಧ್ಯಕ್ಷ ಡಿ.ಎಂ. ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.