ಸೋಮವಾರಪೇಟೆ, ಜು. 24: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮೇಲಿನ ಪೆಟ್ರೋಲ್ ಬಂಕ್‍ನಿಂದ ಮಡಿಕೇರಿ ರಸ್ತೆ ಸಂಪರ್ಕಿಸುವ ರಸ್ತೆ ಬದಿಯಲ್ಲಿ ಸ್ಲ್ಯಾಬ್ ತುಂಡಾಗಿ ಗುಂಡಿ ನಿರ್ಮಾಣವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಕರ್ನಾಟಕ ಬ್ಯಾಂಕ್ ಮತ್ತು ಎಸ್‍ಬಿಐ ಬ್ಯಾಂಕ್‍ನ ಮಧ್ಯಭಾಗದ ರಸ್ತೆ ಬದಿಯಲ್ಲಿ ನಿರ್ಮಿಸಿದ್ದ ಚರಂಡಿಗೆ ಸ್ಲ್ಯಾಬ್ ಅಳವಡಿಸಲಾಗಿದ್ದು, ಇದೀಗ ಸ್ಲ್ಯಾಬ್ ಮುರಿದು ಬಿದ್ದು ಗುಂಡಿ ನಿರ್ಮಾಣವಾಗಿದ್ದರೂ ಸಂಬಂಧಿಸಿದ ಪ.ಪಂ. ಇತ್ತ ಗಮನಹರಿಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ರಾತ್ರಿವೇಳೆ ಪಾದಚಾರಿಗಳು ಈ ಗುಂಡಿಯೊಳಗೆ ಬಿದ್ದು ಕೈಕಾಲು ಮುರಿದುಕೊಳ್ಳುವ ಮುನ್ನ ಪಟ್ಟಣ ಪಂಚಾಯಿತಿ ಇತ್ತ ಗಮನ ಹರಿಸಿ ಸ್ಲ್ಯಾಬ್ ಹಾಕಬೇಕೆಂದು ಒತ್ತಾಯಿಸಿದ್ದಾರೆ.