ಮಡಿಕೇರಿ, ಜು. 24: ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಇಬ್ಬನಿ ರೆಸಾರ್ಟ್ ಸಮೀಪ ಕಾರು ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿ ನಾಲ್ವರು ಗಾಯಗೊಂಡಿದ್ದಾರೆ.

ಮೈಸೂರಿನಿಂದ ಮಡಿಕೇರಿಗೆ ಬರುತ್ತಿದ್ದ ಸರ್ಕಾರಿ ಬಸ್ (ಕೆ.ಎ. 09 - ಎಫ್ - 5205) ಹಾಗೂ ಮಡಿಕೇರಿಯಿಂದ ಮೈಸೂರಿನತ್ತ ತೆರಳುತ್ತಿದ್ದ ಬೊಲೆರೋ ಕಾರು (ಕೆ.ಎ. 51 ಐಎ 3299) ನಡುವೆ ಅಪಘಾತ ಸಂಭವಿಸಿದ್ದು; ಕಾರಿನಲ್ಲಿದ್ದ ಮಣಿಪಾಲ ಮೂಲದ ವಿಶ್ವಾಸ್, ಅಕ್ಷಯ್, ರವಿಕಾಂತ್ ಹಾಗೂ ಚೇತನ್ ಎಂಬವರುಗಳು ಗಾಯಗೊಂಡಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.