ಸುಂಟಿಕೊಪ್ಪ, ಜು. 24: ಹೊಸಕೋಟೆಯಲ್ಲಿ ಶಾಲಾ ವಿದ್ಯಾರ್ಥಿನಿ ಯೋರ್ವಳಿಗೆ ಜೀಪು ಡಿಕ್ಕಿಯಾಗಿ ಸಣ್ಣ ಗಾಯಗಳಿಂದ ಪಾರಾಗಿರುವ ಘಟನೆ ನಡೆದಿದೆ. 7ನೇ ಹೊಸಕೋಟೆಯ ಕಲ್ಲುಕೋರೆ ನಿವಾಸಿ ಜನಾರ್ಧನ ಎಂಬವರ ಪುತ್ರಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸ್ನೇಹ ತಾ. 23 ರಂದು ಸಂಜೆ ಶಾಲೆ ಬಿಟ್ಟು ಹೆದ್ದಾರಿ ಬದಿಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಸುಂಟಿಕೊಪ್ಪ ಕಡೆಯಿಂದ ಕುಶಾಲನಗರಕ್ಕೆ ಕಾರ್ಮಿಕರನ್ನು ಕರೆದೊಯುತ್ತಿದ್ದ ಮಹೇಂದ್ರ ಜೀಪು (ಕೆಎ 12 ಎನ್ 1351) ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಸಣ್ಣ ಪುಟ್ಟ ಗಾಯಗೊಂಡು ವಿದ್ಯಾರ್ಥಿನಿ ಪ್ರಾಣಪಾಯದಿಂದ ಪಾರಾಗಿದ್ದಾಳೆ. ಜೀಪ್ ಚಾಲಕ ಸುಬ್ಬು ವಿರುದ್ಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಜೀಪನ್ನು ವಶಪಡಿಸಿಕೊಂಡಿದ್ದಾರೆ.