ಕಳೆದ ಬಾರಿ 116.22 ಇಂಚು

ಮಡಿಕೇರಿ, ಜು. 23: ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿ ನಗರಕ್ಕೆ ಪ್ರಸಕ್ತ ವರ್ಷ 36.88 ಇಂಚು ಮಳೆಯಾಗಿದೆ. ಜನವರಿಯಿಂದ ಈತನಕ ಇಷ್ಟು ಪ್ರಮಾಣದ ಮಳೆ ಇಲ್ಲಿ ದಾಖಲಾಗಿದೆ. ಕಳೆದ ಬಾರಿ ಈ ಅವಧಿಯಲ್ಲಿ ನಗರ ವ್ಯಾಪ್ತಿಯಲ್ಲಿ 100 ಇಂಚಿಗಿಂತಲೂ ಅಧಿಕ ಮಳೆ ಬಿದ್ದಿದ್ದನ್ನು ಸ್ಮರಿಸಬಹುದಾಗಿದೆ.

ಕಳೆದ ವರ್ಷ ಜನವರಿಯಿಂದ ಜುಲೈ 23ರ ದಿನಾಂಕದವರೆಗೆ ಒಟ್ಟು 116.22 ಇಂಚಿನಷ್ಟು ಭಾರೀ ಮಳೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅವಧಿಯವರೆಗೆ 79.34 ಇಂಚಿನಷ್ಟು ಮಳೆ ಕಡಿಮೆಯಾಗಿದೆ.

ಪ್ರಸಕ್ತ ವರ್ಷ ಜನವರಿ ಆರಂಭದಿಂದಲೇ ನಗರದಲ್ಲಿ ಹೆಚ್ಚು ಮಳೆಯಾಗಿರಲಿಲ್ಲ. ವಾಡಿಕೆಯಂತೆ ಜೂನ್ ಆರಂಭದಿಂದ ಪ್ರಾರಂಭಗೊಳ್ಳುವ ಮುಂಗಾರು ಮಳೆಯೂ ಈತನಕ ಬಹುತೇಕ ಕ್ಷೀಣಗೊಂಡಿತ್ತು. ಇದೀಗ ಕಳೆದ ಒಂದೆರಡು ದಿನಗಳಿಂದ ಮಾತ್ರ ಮಡಿಕೇರಿ ನಗರ ತುಸು ಹೆಚ್ಚಿನ ಮಳೆಯನ್ನು ಕಾಣುತ್ತಿದೆ. ಮೋಡ-ಮಳೆಯ ವಾತಾವರಣದ ನಡುವೆ ಚಳಿಯೂ ಹೆಚ್ಚಾಗಿರುವದು ಕಂಡು ಬರುತ್ತಿದೆ.