ಮಡಿಕೇರಿ, ಜು. 23 : ಚೆಯ್ಯಂಡಾಣೆಯ ನರಿಯಂದಡ ಕೇಂದ್ರ ವಿದ್ಯಾಸಂಸ್ಥೆಯ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಚೇನಂಡ ಈ.ಗಿರೀಶ್ ಪೂಣಚ್ಚ, ಉಪಾಧ್ಯಕ್ಷರಾಗಿ ಚೈಯಂಡ ಪೆಮ್ಮಯ್ಯ ಹಾಗೂ ಸಂಚಾಲಕರಾಗಿ ಮುಂಡ್ಯೋಳಂಡ ಬಿದ್ದಪ್ಪ, ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕÀ ಮನೋಹರ್ ನಾಯಕ್, ಖಜಾಂಚಿಯಾಗಿ ಬೊವ್ವೇರಿಯಂಡ ಕುಟ್ಟಪ್ಪ, ನಿರ್ದೇಶಕರುಗಳಾಗಿ ಬಿದ್ದಂಡ ಅಚ್ಚಯ್ಯ, ಜೈನೀರ ಉಮೇಶ್, ಬೊವ್ವೇರಿಯಂಡ ಆಶಾ, ಬಟ್ಟಿಯಂಡ ಮೇದಪ್ಪ ಹಾಗೂ ಎಡಪಾಲ ರಜಾóಕ್ ನೇಮಕಗೊಂಡಿದ್ದಾರೆ.