ಗೋಣಿಕೊಪ್ಪ ವರದಿ, ಜು. 22: ; ಆಧಾರ್ ಸೇವೆ ಪಡೆಯಲು ಮೂಲ ಜನನ ಪ್ರಮಾಣಪತ್ರ ದಾಖಲಾತಿ ಇಲ್ಲದೆ ಆದಿವಾಸಿಗಳು ಆಧಾರ್ ಪಡೆಯಲಾಗದೆ ಹಿಂತಿರುಗಿದ ಘಟನೆ ಹುದಿಕೇರಿ ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು.ಬೆಳಿಗ್ಗೆಯಿಂದ ಕೆಲಸ ಬಿಟ್ಟು ಜಮಾಯಿಸಿದ್ದ ಆದಿವಾಸಿಗಳು ಆಧಾರ್ ನೋಂದಣಿಗೆ ಮೂಲ ಪ್ರಮಾಣಪತ್ರ ಬೇಕು ಎಂಬ ಅಧಿಕಾರಿಗಳ ಮನವಿಗೆ ಸ್ಪಂದಿಸಲಾಗದೆ ನಿರಾಸೆ ಅನುಭವಿಸಿದರು. ವಿವಿಧ ದಾಖಲೆಗಳಲ್ಲಿ ಮಾತ್ರ ಜನನ ದಿನಾಂಕ ದಾಖಲಾಗಿರುವದರಿಂದ ತಾಂತ್ರಿಕವಾಗಿ ಆಧಾರ್ ದಾಖಲಿಸ ಲಾಗುತ್ತಿಲ್ಲ ಎಂದು ಅಧಿಕಾರಿಗಳು ಕೈ ಚೆಲ್ಲಿದರು.ಅಭಿಯಾನದಲ್ಲಿ ಪಾಲ್ಗೊಂಡ 50 ಕ್ಕೂ ಹೆಚ್ಚು ಆದಿವಾಸಿಗಳಲ್ಲಿ ಮೂಲ ಜನನ
(ಮೊದಲ ಪುಟದಿಂದ) ಪ್ರಮಾಣ ಪತ್ರವಿಲ್ಲದೆ ಸೇವೆಯಿಂದ ವಂಚಿತರಾದರು. ಅಂಚೆ ಕಚೇರಿಗಳಲ್ಲಿ ನೀಡುವ ಆಧಾರ್ ನೋಂದಣಿಗೆ ವಿವಿಧ ದಾಖಲೆಗಳಲ್ಲಿ ಜನನ ದಿನಾಂಕ ದಾಖಲೆಗಳಿದ್ದರೂ ನೀಡ ಲಾಗುತ್ತದೆ. ಆದರೆ, ಆದಿವಾಸಿ ಗಳಿಗೆ ಸರ್ಕಾರದ ಸವಲತ್ತು ಪಡೆಯಲೆಂದೇ ರೂಪಿಸಿರುವ ವಿಶೇಷ ಅಭಿಯಾನದಲ್ಲಿ ಅಧಿಕಾರಿಗಳು ಮೂಲ ದಾಖಲೆ ಕೇಳುತ್ತಿರುವ ದರಿಂದ ತೊಂದರೆ ಯಾಯಿತು ಎಂದು ಅವರು ನೋವಿನಿಂದ ನುಡಿದರು.
ಮೂಲ ಪ್ರಮಾಣಪತ್ರವಿಲ್ಲದೆ ಆಧಾರ್ ಪಡೆಯಲಾಗದೆ ಆದಿವಾಸಿ