ಮಡಿಕೇರಿ, ಜು. 23: ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಿಲ್ಲೆಯ ಮೂರ್ನಾಡು-ಮುತ್ತಾರುಮುಡಿಯ ಮಹಿಳೆಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಮುತ್ತಾರುಮುಡಿಯ ಮೇರ್‍ಕಜೆ ದಿ. ನಾಣಯ್ಯ ಅವರ ಪತ್ನಿ ಬೊಳ್ಳಮ್ಮ (ಬೋಜಿ-73) ಅವರು ಮೈಸೂರಿನಲ್ಲಿರುವ ಅವರ ಪುತ್ರ ನಾಣಯ್ಯ ಮನೆಯಲ್ಲಿ ವಾಸವಾಗಿದ್ದರು. ಇದೀಗ ತಾ. 18 ರಿಂದ ಅವರು ನಾಪತ್ತೆಯಾಗಿರುವದಾಗಿ ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ 9591017914 ಅಥವಾ ವಿಜಯನಗರ ಪೊಲೀಸ್ ಠಾಣೆ (0821-2418317)ಗೆ ತಿಳಿಸುವಂತೆ ಪ್ರಕಟಣೆ ಕೋರಿದೆ.