ಮಡಿಕೇರಿ, ಜು. 23: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಘಟಕದ ವತಿಯಿಂದ ಕನ್ನಡ ಶಾಲೆ ಉಳಿಸಿ-ಬೆಳೆಸಿ ಅಭಿಯಾನದ ಉದ್ಘಾಟನಾ ಸಮಾರಂಭ ಹಾಗೂ 10 ಸರಕಾರಿ ಶಾಲೆಯ ನಲಿ ಕಲಿ ಮಕ್ಕಳಿಗೆ ಪೀಠೋಪಕರಣ ನೀಡಿಕೆ ಅನ್ನಪೂರ್ಣೇಶ್ವರಿ ಕಲಾ ಮಂದಿರ ಪೆರಾಜೆಯಲ್ಲಿ ನಡೆಯಿತು.

ಉದ್ಘಾಟಕರಾಗಿ ಗ್ರಾಮಾಂತರ ಠಾಣೆ ಮಡಿಕೇರಿ ಠಾಣಾಧಿಕಾರಿ ಚೇತನ್ ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ಉನೈಸ್ ಪೆರಾಜೆ ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಾಗೇಶ್ ಕುಂದಲ್ಪಾಡಿ ತಾ.ಪಂ. ಸದಸ್ಯ, ಗ್ರಾ.ಪಂ. ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಸುರೇಶ್ ಪೆರುಮುಂಡ ಮಾಜಿ ಮೊಕ್ತೇಸರರು, ವಾಣಿ ಮಾಚಿಮಾಡ, ಎಂ.ಎಲ್. ರವಿ, ವಸಂತಿ, ರೀಟಾ ಆಂಟನಿ, ಮನು ಪೆರುಮುಂಡ, ರಶೀದ್ ಉಪಸ್ಥಿತ ರಿದ್ದರು. ಜಯಲಕ್ಷ್ಮಿ ಪ್ರಾರ್ಥಿಸಿ, ಜಿಲ್ಲಾಧ್ಯಕ್ಷ ಸತೀಶ್ ಹೊದ್ದೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿದರು. ಎಲ್ಲಾ ಶಾಲೆಗಳ ಮುಖ್ಯೋಪಾ ಧ್ಯಾಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕ.ರ.ವೇ. ಮಡಿಕೇರಿ ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷ ನೌಫಲ್ ಅಯ್ಯಂಗೇರಿ, ಪೆರಾಜೆ ವಲಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಾಸಿತ್, ವಲಯದ ಅಧ್ಯಕ್ಷ ಅಶ್ರಫ್ ಸಹಕರಿಸಿದರು.