ನವದೆಹಲಿ, ಜು. 22: ಲೋಕಸಭೆಯಲ್ಲಿ ತಾ. 22 ರಂದು ಆರ್ಟಿಐ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಸ್ಪೀಕರ್ ಮಸೂದೆಯನ್ನು ಧ್ವನಿ ಮತಕ್ಕೆ ಹಾಕಿದ್ದು ಮಸೂದೆ ಅಂಗೀಕಾರವಾಗಿದೆ. ತಿದ್ದುಪಡಿ ಮಸೂದೆಯ ಪ್ರಕಾರ ರಾಜ್ಯ ಹಾಗೂ ಕೇಂದ್ರ ಮಾಹಿತಿ ಆಯುಕ್ತರ ಕಾರ್ಯಾವಧಿ ಹಾಗೂ ವೇತನವನ್ನು ನಿರ್ಧರಿಸುವ ಅಧಿಕಾರ ಕೇಂದ್ರಕ್ಕೆ ಸಿಗಲಿದೆ. ತಿದ್ದುಪಡಿ ಮಸೂದೆಯನ್ನು ವಿರೋಧಿಸಿರುವ ಪ್ರತಿಪಕ್ಷಗಳು ತಿದ್ದುಪಡಿ ಮಸೂದೆಯಿಂದ ಆರ್ಟಿಐ ಪರಿಣಾಮಕಾರಿತ್ವ ಕಳೆದುಕೊಳ್ಳಲಿದೆ ಎಂದು ಆರೋಪಿಸಿವೆ.