ಗೋಣಿಕೊಪ್ಪಲು, ಜು. 21: ಇತ್ತೀಚೆಗೆ ಇಲ್ಲಿನ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ‘ಕಾವೇರಿ ದರ್ಶಿನಿ’ ಎಂಬ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ವಾರ್ಷಿಕ ಸಂಚಿಕೆಯನ್ನು ದೇಶಕ್ಕಾಗಿ ಹೋರಾಡುವ ಸೈನಿಕರಿಗೆ ಸಮರ್ಪಿಸಲಾಯಿತು.

ಈ ಸಂದರ್ಭ ದೇಶದ ರಕ್ಷಣೆಗಾಗಿ ಉಗ್ರರೊಂದಿಗೆ ಹೋರಾಡಿ ವಿಜಯಿಯಾದ ಶೌರ್ಯ ಪ್ರಶಸ್ತಿ ಪುರಷ್ಕøತ, ಕೊಡಗಿನ ನಿವಾಸಿ ಹೆಚ್.ಎನ್. ಮಹೇಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪತ್ರಕರ್ತ ಜೀವನ್ ಚಿಣ್ಣಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಎ.ಸಿ. ಗಣಪತಿ ಅಧ್ಯಕ್ಷತೆ ವಹಿಸಿದ್ದರು.

ವಾರ್ಷಿಕ ಸಂಚಿಕೆಯ ಸಂಚಾಲಕಿ ಪದ್ಮ ಎಂ.ಕೆ. ಸಂಚಿಕೆ ಕುರಿತು ಮಾತನಾಡಿದರು. ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಸಂಚಾಲಕಿ ಡಾ. ರೇಖಾ ಚಿಣ್ಣಪ್ಪ ವಂದಿಸಿದರು.